ಪೆರ್ಲ : ಇಡಿಯಡ್ಕ ಸಮೀಪದ ಕುದ್ವ ದಿ. ಮಂಜಪ್ಪ ರೈಗಳ ಧರ್ಮಪತ್ನಿ ವೇದಾವತಿ ರೈ (83) ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಸದ್ಗಹಿಣಿಯಾಗಿದ್ದ ಇವರು ಮಕ್ಕಳಾದ ರಾಮಕೃಷ್ಣ ರೈ ಕುದ್ವ (ಪೆರ್ಲ ಅಗ್ರಿಕಲ್ಚರ್ ಕೋಆಪರೇಟಿವ್ ಬ್ಯಾಂಕ್ ಕಾರ್ಯದರ್ಶಿ),ವಿಜಯಕುಮಾರಿ, ಪ್ರಕಾಶ್ ರೈ,ಅಳಿಯ ಭಾಸ್ಕರ ರೈ ಮೊಟ್ಟೆಕುಂಜ, ಸೊಸೆಯಂದಿರಾದ ನಳಿನಾಕ್ಷಿ,ಉಷಾ ಹಾಗೂ ಸಹೋದರ ಜಯರಾಮ ಶೆಟ್ಟಿ ವಿಟ್ಲ ,ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು 11 ಗಂಟೆಯ ವೇಳೆಗೆ ಮನೆ ಪರಿಸರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
0 Comments