Ticker

6/recent/ticker-posts

ಮುಂಬೈ ಯಕ್ಷಗಾನ ಸಮಾರಾಧನೆಯ ತ್ರಿಂಶತ್ ಉತ್ಸವದಲ್ಲಿ ಗಲ್ಫ್ ರಾಷ್ಟ್ರದ ಕನ್ನಡಿಗರಿಗೆ ಗೌರವಾರ್ಪಣೆ

 


ಯುಎಇ : ಕಟೀಲು ಶ್ರೀ ದುರ್ಗಾಪರಮೇಶ್ವರಿ ಆರಾಧಕರಾಗಿ ಯಕ್ಷಗಾನಾರಾಧನೆಯ ಮೂಲಕ ಶ್ರೀ ದೇವಿಯ ಸಾಕ್ಷಾತ್ಕಾರ  ಸಾದ್ಯ ಎಂದು ತೋರಿಸಿಕೊಟ್ಟ ಪರಮ ಪೂಜ್ಯರಾದ ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಆದರ್ಶ ತತ್ವಗಳಿಂದ. ಕಲಾಪ್ರೀತಿಯಿಂದ ಅಂತಸ್ಪೂರ್ತಿ ಪಡೆದು ಅದನ್ನೆ ಮೊಳಕೆಯಾಗಿಸಿ ಹುಟ್ಟಿಕೊಂಡ ಸಂಸ್ಥೆ ಕಟೀಲು ಶ್ರೀ ಗೋಪಾಲಕೃಷ್ಣ ಸಂಸ್ಮರಣಾ ಸಮಿತಿ ಮುಂಬಯಿ.

         ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರ ಮಂಗಲ ಮಂತ್ರಕ್ಷತೆಯೊಂದಿಗೆ ಆರಂಭಗೊಂಡ ಈ ಸಂಸ್ಥೆಯನ್ನು ಶ್ರೀ ದೇವಿಯ ಭಜಕರಾದ ಪದ್ಮನಾಭ ಕಟೀಲುರವರು ಕಳೆದ ಮೂವತ್ತು ವರ್ಷಗಳಿಂದ 450 ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರಿಗೆ ಗೌರವ ನಿಧಿಯೊಂದಿಗೆ ಸಂಮಾನ,ಅಸ್ರಣ್ಣ ಸಂಸ್ಕರಣೆ, ಸುಹೃತ್ ಸಂಮಾನ,ಸಾಮೂಹಿಕ ವಿವಾಹ, ವಿದ್ಯಾರ್ಥಿ ವೇತನ ನೀಡುವಿಕೆ,ಅಶಕ್ತ ಕಲಾವಿದರಿಗೆ ಆರ್ಥಿಕ ನೆರವಿನಂತಹ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಕಲೆ ಕಲಾವಿದರ ಪೋಷಣೆಯನ್ನೇ ಸಂಕಲ್ಪ ಮಂತ್ರವಾಗಿಸಿಕೊಂಡು ತೆಂಕು- ಬಡಗುಗಳ ಭೇದವಿಲ್ಲದೆ ಕಟೀಲು-ಪೆರ್ಡೂರು ಮೇಳಗಳ ಕಲಾವಿದರಿಂದ ಯಕ್ಷಗಾನಾರಾಧನೆ ನಡೆಸುತ್ತಾ ಬಂದಿದೆ.ಸಾಮಾಜಿಕ ಸಾಹಿತ್ಯಿಕ ಪೋಷಣೆಯನ್ನು ಅಸ್ರಣ್ಣರ ಹೆಸರಲ್ಲಿ ಮಾಡುತ್ತಾ ಶ್ರೇಷ್ಠ ದೈವಿಕ ಸಾಂಸ್ಕೃತಿಕ ವ್ಯಕ್ತಿಯೊಂದನ್ನು ಆರಾಧಿಸುತ್ತಾ ಬಂದಿದೆ.
      ಯಕ್ಷಗಾನ ಪ್ರೀತಿಗೆ ಒಂದು ಹೊಸ ಹರಿವು ನೀಡಿ ಸಂಪೂಜ್ಯರ ಸಂಸ್ಕರಣೆ ಮಾಡುತ್ತಾ ಬಂದಿರುವ ಈ ಸಂಸ್ಥೆಗೆ ಮೂವತ್ತರ ಹರೆಯ.ಈ ನಡೆಯನ್ನು ಸ್ಮರಣೀಯಗೊಳಿಸಬೇಕಂಬ ಸದುದ್ದೇಶ ಹೊಂದಿರುವ ಈ  ಸಂಸ್ಥೆಯು ಅಗಸ್ಟ್ ಎರಡರಂದು ಮುಂಬಯಿಯ ಕುರ್ಲಾದ ಬಂಟರ ಭವನದಲ್ಲಿ ಪೂಜ್ಯ ಅಸ್ರಣ್ಣರ ಸಂಸ್ಕರಣಾ ಕಾರ್ಯಕ್ರಮ ಆಯೋಜಿಸಿ, ಯಕ್ಷಗಾನ ಸತ್ರವೊಂದನ್ನು ಹಮ್ಮಿಕೊಂಡಿದ್ದು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪುಣ್ಯಪ್ರದವಾದ "ಶ್ರೀ ದೇವಿ ಮಾಹಾತ್ಮ್ಯೆ" ಯಕ್ಷಗಾನ ಪ್ರದರ್ಶನ, ವಿದ್ವತ್ ಸಂಮಾನ ಹಾಗೂ ಕಳೆದ ಮೂವತ್ತು ವರ್ಷಗಳಿಂದ ಸಂಸ್ಥೆಗೆ ಆಧಾರಿಸಿ ಸಹಕಾರ ನೀಡಿದ ಗಲ್ಫ್ ರಾಷ್ಟದ ಹನ್ನೆರಡು ಮಂದಿ ಕನ್ನಡ ಸಾಧಕರನ್ನು


ಒಂದೇ ವೇದಿಕೆಯಲ್ಲಿ ಗೌರವಿಸುವ ಕಾರ್ಯಕ್ರಮವನ್ನು ಪದ್ಮನಾಭ ಕಟೀಲುರವರು ಹಮ್ಮಿಕೊಂಡಿದ್ದರೆ.
     *ಸರ್ವೋತ್ತಮ ಶೆಟ್ಟಿ ಅಬುಧಾಬಿ*: ಯುಎಇಯಲ್ಲಿ ಉತ್ತಮ ಸಂಘಟನ ಕ್ಷೇತ್ರದಲ್ಲಿ ಹೆಸರುವಾಸಿಯಾಗಿ, ಕರ್ನಾಟಕ ಸರಕಾರದ "ಕನ್ನಡ ರಾಜ್ಯೋತ್ಸವ" ಪ್ರಶಸ್ತಿ ಪುರಸ್ಕೃತರು ,ತುಳು ಕನ್ನಡ ಸಂಘ ಸಂಸ್ಥೆಗಳ ಮೂಲಕ ತನ್ನನ್ನು ತಾನು ತೊಡಗಿಸಿಕೊಂಡಂತಹ ಯುಎಇ ಬಂಟ್ಸ್ ನ ಗೌರವ ಅಧ್ಯಕ್ಷರು,ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರ ಹಿರಿತನ.

*ವಾಸು ಶೆಟ್ಟಿ ಪೇಜಾವರ ಪಡುಬಾಳಿಕೆ ಗುತ್ತು* :ಉತ್ತಮ ರಂಗ ಕಲಾವಿದರಾಗಿ ಗಮ್ಮತ್ ಕಲಾವಿದೆರ್ ದುಬೈ ತಂಡದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಜನ ಮೆಚ್ಚುಗೆ ಪಡೆದ ಕಲಾವಿದ ಹಾಗೂ ಸಮಾಜ ಸೇವೆಯನ್ನು ಗುರುತಿಸಿ.
*ಜಯಂತ್ ಶೆಟ್ಟಿ* :ಕರ್ನಾಟಕ ಸಂಘ ದುಬೈಯ ಸ್ಥಾಪಕ ಸದಸ್ಯರಲ್ಲಿ ಒರ್ವರಾದ ಶೆಟ್ಟಿಯವರು ಹಲವಾರು ಕಾರ್ಯಕ್ರಮ ಸಂಘಟನೆ ಮಾಡಿದ ಹಿರಿಯವರಲ್ಲಿ ಕಿರಿಯರಾದ ನಿಮ್ಮ ಸೇವೆಗೆ ಈ ಗೌರವ.
*ಸತೀಶ್ ಪೂಜಾರಿ* ಕೊಡುಗೈದಾನಿಯೂ,ಸಮಾಜ ಸೇವಕರು ಎತ್ತಿದ ಕೈ. ಬಿಲ್ಲವಾಸ್ ಫ್ಯಾಮಿಲಿ ದುಬೈಯ ಮಾಜಿ ಅಧ್ಯಕ್ಷರಾಗಿ ಹಾಗೂ ಶಾರ್ಜಾ ಕರ್ನಾಟಕದ ಸಂಘದ ಪ್ರಸ್ತುತ ಅಧ್ಯಕ್ಷರಾಗಿರುವ ಸೇವೆ ಸಲ್ಲಿಸುತ್ತಿರುವ ನಿಮ್ಮ ಸೇವೆಯನ್ನು ಗೌರವಿಸಿ.
*ಪ್ರಭಾಕರ ಡಿ. ಸುವರ್ಣ ಕರ್ನಿರೆ* : ಬಿಲ್ಲವಾಸ್ ಫ್ಯಾಮಿಲಿಯ ಮಾಜಿ ಅಧ್ಯಕ್ಷ,ಇತ್ತೀಚೆಗೆ ದಶಮಾನೋತ್ಸವ ಆಚರಿಸಿದ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಹಿರಿಯ ಯಕ್ಷ ಕಲಾವಿದ ಹಾಗೂ ಕರ್ನಿರೆ ಪ್ರತಿಷ್ಠಾನ ಎಂಬ ಟ್ರಸ್ಟ್ ನ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ನಿಮ್ಮ ಸೇವೆಯನ್ನು ಗೌರವಿಸಿ.
*ರಾಜ್ ಕುಮಾರ್ ಬಹ್ರೈನ್*: ಭಾರತಾಂಭೆಯ ಕನ್ನಡ ಸಂಸ್ಕೃತಿಯನ್ನು ಅರಬ್ ರಾಷ್ಟ್ರದಲ್ಲಿ ಬಿತ್ತರಿಸುವ ಸಲುವಾಗಿ ಕನ್ನಡ ಸಂಘ ಬಹರೈನ್ ಅಧ್ಯಕ್ಷರಾಗಿ ಎರಡು ಬಾರಿ ಮರಳುನಾಡಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ಮಾಡಿ ಹಾಗೂ ನಿಮ್ಮ ಸಮಾಜ ಸೇವೆಯನ್ನು ಕಂಡು ಈ ಗೌರವ.
*ಸತೀಶ್ ಶೆಟ್ಟಿ*: ದುಬೈನಲ್ಲಿ  ಉದ್ಯಮದಲ್ಲಿದ್ದರು ತನ್ನಿಂದಾದ ಅಲ್ಪ ಮೊತ್ತವನ್ನು ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡುವ ಕಲಾ ಪೋಷಕರು.
*ಬಿ.ಕೆ.ಪದ್ಮರಾಜ್ ಎಕ್ಕಾರು*: ಉದ್ಯಮದೊಂದಿಗೆ ಹಲವಾರು  ದುಬೈನಲ್ಲಿ ಹಲವಾರು ಕಾರ್ಯಕ್ರಮ ಸಂಘಟನೆ ಮಾಡಿದ ಉತ್ತಮ ಸಂಘಟಕ ಹೆಸರುವಾಸಿಯಾಗಿ ಹಾಗೂ ಸಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಿಮ್ಮ ಸೇವೆಯನ್ನು ಗೌರವಿಸಿ.
*ಮನೋಹರ ತೋನ್ಸೆ ಅಬುಧಾಬಿ* : ಅಬುಧಾಬಿಯಲ್ಲಿ ಉದ್ಯಮದೊಂದಿಗೆ ಹವ್ಯಾಸಿ ಪತ್ರಿಕಾ ಅಂಕನಕಾರರಾಗಿ ಹಾಗೂ ಕರ್ನಾಟಕ ಸಂಘ ಅಬುಧಾಬಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ನಿಮ್ಮ ಸೇವೆಯನ್ನು ಗೌರವಿಸಿ.
*ಧನಂಜಯ ಶೆಟ್ಟಿಗಾರ್ ದುಬೈ-ಕಿನ್ನಿಗೋಳಿ*: ಯಕ್ಷ ಕಲಾ ಆರಾಧಕ, ಕಲಾ ಪೋಷಕರಾಗಿ ಹಾಗೂ ಪದ್ಮಶಾಲಿ ಸಮುದಾಯ ಉಡುಪಿ(ರಿ) ನ ಟ್ರಸ್ಟಿ.
*ರಿತೇಶ್ ಅಂಚನ್ ಕುಲಶೇಖರ*: ದುಬೈಯ ತುಳು ಪಾತೆರ್ಗ ತುಳು ಒರಿಪಾಗ ಸಂಸ್ಥೆಯ ಕಾರ್ಯದರ್ಶಿಯಾಗಿ ಈ ಸಂಸ್ಥೆಯ ಮೂಲಕ ಹಲವಾರು ಕಾರ್ಯಕ್ರಮ ಸಂಘಟಿತ ಚತುರ.
*ಶರತ್ ಶಶಿಕರ ಶೆಟ್ಟಿ*: ದುಬೈನಲ್ಲಿ ಹೋಟೆಲ್ ಉದ್ಯಮದೊಂದಿಗೆ ಹಲವಾರು ಸಂಘ ಸಂಸ್ಥೆಗಳಿಗೆ ಸಹಾಯ ಸಹಕಾರ ಮಾಡುವ ಕಲಾ ಪೋಷಕರು
      ಹಾಗೂ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ,ಸ್ವಂತಿಕೆಯಿಂದಲೇ ಹಲವು ವಿಶಿಷ್ಟತೆಗಳನ್ನು ಹುಟ್ಟು ಹಾಕಿದ ಕಲಾರಾಧಕ ಡಾ.ಎಂ.ಮೋಹನ್ ಆಳ್ವ ರವರಿಗೆ "ಶ್ರೀ ಅಸ್ರಣ್ಣ " ಪ್ರಶಸ್ತಿ,ಆಟ- ಕೂಟಗಳ ಸಾಮ್ರಾಟ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ "ಅಗರಿ ಪ್ರಶಸ್ತಿ" ಮತ್ತು ಕಲಾ ಪೋಷಕರಾದ ಐಕಳ ಗಣೇಶ ಶೆಟ್ಟಿಯವರಿಗೆ "ಕಲ್ಲಾಡಿ ವಿಠಲ ಶೆಟ್ಟಿ ಪ್ರಶಸ್ತಿ" ನೀಡಿ ಗೌರವಿಸಲಾಗುವುದು.
ಬರಹ :  ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

Post a Comment

0 Comments