Ticker

6/recent/ticker-posts

ಕುರುಡಪದವು ಹಿರಿಯ ಪ್ರಾಥಮಿಕ ಶಾಲಾ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ರಕ್ಷಕರಿಗೆ ಜಾಗೃತಿ ಸಭೆ

ಕುರುಡಪದವು: ಹಿರಿಯ ಪ್ರಾಥಮಿಕ ಶಾಲೆ ಕುರುಡಪದವಿನಲ್ಲಿ  ಶಾಲಾ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ರಕ್ಷಕರಿಗೆ ಮಾದಕದ್ರವ್ಯ ಬಳಕೆ ತಡೆಗಟ್ಟಲು ಜಾಗೃತಿ ಸಭೆ ನಡೆಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಪದ್ಮನಾಭ ಬರ್ಲಾಯ ಸರ್ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.


ಶಾಲಾ ರಕ್ಷಕ ಶಿಕ್ಷಕ ಅಧ್ಯಕ್ಷರಾದ ಬಷೀರ್ ಸಾಪ್ಟ್ಕೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಸಂರಕ್ಷಣಾ ಸಮಿತಿ ಸಂಯೋಜಕರಾದ ಪ್ರಶಾಂತ್ ಕುಮಾರ್ ಅಮ್ಮೇರಿ  ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾ ಸಂರಕ್ಷಣಾ ಸಮಿತಿ ಸದಸ್ಯರೂ , ನಿವೃತ್ತ ಮುಖ್ಯೋಪಾಧ್ಯಾಯಿನಿಯೂ ಆದ ಶ್ರೀಮತಿ ಶ್ರೀಕುಮಾರಿ ಟೀಚರ್  ಮಾದಕದ್ರವ್ಯ ಬಳಕೆ ತಡೆಗಟ್ಟಲು ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ರಕ್ಷಕರಿಗೆ ಸವಿವರವಾಗಿ ವಿಚಾರಗಳನ್ನು ತಿಳಿಸಿಕೊಟ್ಟರು. ಅಗ್ನಿಶಾಮಕ ದಳದ ಅಧಿಕಾರಿ  ಸಂದೀಪ್ ಪಿ ಆರ್ , ವಿದ್ಯುತ್, ಜಲ, ಅಗ್ನಿ ಅವಘಡಗಳಿಂದ ಹೇಗೆ  ಸಂರಕ್ಷಣೆ ಪಡೆಯಬಹುದೆಂದು ರಕ್ಷಕರಿಗೆ ವಿವರವಾದ ಮಾಹಿತಿಯನ್ನು ತಿಳಿಸಿಕೊಟ್ಟರು‌.ಮಂಜೇಶ್ವರ ನಾಗರಿಕ ಸೇವಾ ಪೋಲೀಸ್ ಅಧಿಕಾರಿ ವಿಜಿತ್ ಎನ್,ಶಾಲಾ ಸಂರಕ್ಷಣಾ ಸಮಿತಿ ಸದಸ್ಯರೂ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಗೋಪಣ್ಣ ಎಂ, ಶಾಲಾ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಹಸೀನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶಾಲಾ ಶಿಕ್ಷಕಿ ಅರ್ಚನಾ ಟೀಚರ್ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.ಶಾಲಾ ಹಿಂದಿ ಶಿಕ್ಷಕರಾದ ಶ್ರೀ ಸತೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments