ಸಹೋದರರಿಬ್ಬರು ಗಂಟೆಗಳ ಅಂತರದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಬೆಳ್ಳೂರು ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ, ಸುಳ್ಯಪದವು ಇಂದಾಜೆ, ದೇವಸ್ಯ ನಿವಾಸಿ ಸುಬ್ರಹ್ಮಣ್ಯ ಭಟ್(72) ಹಾಗೂ ಅವರ ತಮ್ಮ ಶ್ರೀನಿವಾಸ ಭಟ್ (54) ಮೃತಪಟ್ಟವರು. ಇಬ್ಬರೂ ಕೃಷಿಕರಾಗಿದ್ದಾರೆ. ಸುಬ್ರಹ್ಮಣ್ಯ ಭಟ್ ಅವರು ನಿಧನರಾಗಿದ್ದು ನಿನ್ನೆ (ಬುದವಾರ) ಅಂತ್ಯಸಂಸ್ಕಾರ ನಡೆದಿತ್ತು. ನಿನ್ನೆ ಸಾಯಂಕಾಲ ಶ್ರೀನಿವಾಸ ಭಟ್ ನಿಧನರಾದರು.
ಮೃತ ಸುಬ್ರಹ್ಮಣ್ಯ ಭಟ್, ಬೆಳ್ಳೂರು ಗ್ರಾಮ ಪಂಚಾಯತು ಉಪಾಧ್ಯಕ್ಷರಾಗಿ , ಬಿಜೆಪಿ ಅಧ್ಯಲ್ಷರಾಗಿ ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಮೃತರು ಪತ್ನಿ ಮಾಲತಿ, ಮಕ್ಕಳಾದ ಪ್ರತಿಭಾ, ಶೋಭಿತಾ, ಅಳಿಯಂದಿರಾದ ಜಗದೀಶ, ಗಿರೀಶ್ ಎಂಬಿವರನ್ನು ಅಗಲಿದ್ದಾರೆ. ಶ್ರೀನಿವಾಸ ಭಟ್ ಅವರು ಪತ್ನಿ ಜ್ಯೋತಿ, ಮಕ್ಕಳಾದ ಶ್ರೀಕೇಶ, ಭಾಗ್ಯ ಎಂಬಿವರನ್ನು ಅಗಲಿದ್ದಾರೆ
0 Comments