ಕುಂಬ್ಡಾಜೆ: ಇಲ್ಲಿನ ಬಾಳೆಗದ್ದೆಯಲ್ಲಿ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಬಾಳಗದ್ದೆ ನಿವಾಸಿ ನಾರಾಯಣ ಮಣಿಯಾಣಿ (48) ರವರ ಮೃತದೇಹ ಇಂದು (ಗುರುವಾರ) ಮದ್ಯಾಹ್ನ ಪತ್ತೆಹಚ್ಚಲಾಗಿದೆ. ಬಾಳಗದ್ದೆ ಹೊಳೆಯಲ್ಲಿ ಕಾಡುಬಳ್ಳಿಗಳ ಎಡೆಯಲ್ಲಿ ಮೃತದೇಹ ಸಿಲುಕಿತ್ತು. ಅಗ್ನಿಶಾಮಕ ದಳ, ಬದಿಯಡ್ಕ ಪೊಲೀಸರು ಹಾಗೂ ಊರವರು ಸೇರಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.
ಕೂಲಿ ಕಾರ್ಮಿಕರಾಗಿದ್ದ ನಾರಾಯಣ ಮಣಿಯಾಣಿಯವರು ಈ ತಿಂಗಳ 28 ರಂದು ಕೆಲಸಕ್ಕೆ ಹೋಗಿದ್ದು ಹಿಂತಿರುಗಿರಲಿಲ್ಲ. ಈ ಬಗ್ಗೆ ಮನೆಯವರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಮೃತರು ತಂದೆ ಕೊಗ್ಗು ಮಣಿಯಾಣಿ, ತಾಯಿ ಚಂದ್ರಾವತಿ, ಪತ್ನಿ ಸರಸ್ವತಿ, ಮಕ್ಕಳಾದ ವೈಶಾಖ್, ಆತಿರ, ಸಹೋದರ ಸಹೋದರಿಯರಾದ ಶಕುಂತಳ, ಉದಯ, ಭಾಸ್ಕರ, ಶ್ರೀಧರ ಎಂಬಿವರನ್ನು ಅಗಲಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.
0 Comments