Ticker

6/recent/ticker-posts

ಜಿಮ್ಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಂತೆಯೇ ಕುಸಿದು ಬಿದ್ದು ಯುವಕ ಮೃತ್ಯು


 ಜಿಮ್ಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಂತೆಯೇ ಕುಸಿದು ಬಿದ್ದು ಯುವಕ ಮೃತಪಟ್ಟ ಘಟನೆ ನಡೆದಿದೆ

 ಕೊಚ್ಚಿ ಮುಳುಂತುರುತ್ತಿ ನಿವಾಸಿ ಅಬ್ರಹಾಂ ಎಂಬವರ ಪುತ್ರ ರಾಜ್(42) ಮೃತಪಟ್ಟ ಯುವಕ. ಇಂದು (ಬುದವಾರ)  ಬೆಳಗ್ಗೆ 5.30 ರ ವೇಳೆ ಈ ಘಟನೆ ನಡೆದಿದೆ. ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ವ್ಯಾಯಾಮ ಮಾಸಲು ಬರುತ್ತಿದ್ದ ರಾಜ್ ಇಂದು ಬೆಳಗ್ಗೆ 5 ಗಂಟೆಗೆ ಬಂದಿದ್ದರು. ವ್ಯಾಯಾಮ ಮಾಡುತ್ತಿದ್ದಂತೆಯೇ ಕುಸಿದು ಬಿದ್ದರೆನ್ನಲಾಗಿದೆ. ಈ ವೇಳೆ ಜಿಮ್ ಕೇಂದ್ರದಲ್ಲಿ ಯಾರೂ ಇರಲಿಲ್ಲ. 5.30 ಕ್ಕೆ ಆಗಮಿಸಿದವರು ಸೇರಿ ರಾಜ್ ನನ್ನು ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿದ್ದರು.

Post a Comment

0 Comments