Ticker

6/recent/ticker-posts

ಇಲಿ ವಿಷ ಸೇವಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ಮೃತ್ಯು


 ಕಾಸರಗೋಡು:  ಇಲಿ ವಿಷ ಸೇವಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಪಿಲಿಕೋಡ್ ಕೊಲ್ಲರೋಡಿ ನಿವಾಸಿ ಅಶ್ವತಿ(23) ಮೃತಪಟ್ಟ ಯುವತಿ. ಈ ತಿಂಗಳ 26 ರಂದು ಅಶ್ವತಿ ಮನೆಯಲ್ಲಿ ಇಲಿ ವಿಷ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು.‌ಕೂಡಲೇ ಆಕೆಯನ್ನು ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಆಕೆ ನಿನ್ನೆ (ಗುರುವಾರ) ರಾತ್ರಿ ಕೊನೆಯುಸಿರೆಳೆದಳು. ಮೃತಳು ತಂದೆ ವಿದ್ಯಾಧರನ್, ತಾಯಿ ವತ್ಸಲ, ಸಹೋದರ ಅನಿರುದ್ದ, ಸಹೋದರಿ ಆರತಿ ಎಂಬಿವರನ್ನು ಅಗಲಿದ್ದಾರೆ

Post a Comment

0 Comments