ಕುಂಬಳೆ: ಮರಳು ಮಾಫಿಯಾ ತಂಡಕ್ಕೆ ಪೊಲೀಸರ ದಾಳಿಯ ಮಾಹಿತಿ ಸೋರಿಕೆ ಮಾಡಿದ ಪ್ರಕರಣದಲ್ಲಿ ಕುಂಬಳೆ ಪೊಲೀಸ್ ಠಾಣೆಯ 6 ಮಂದಿ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಕುಂಬಳೆ ಎಸ್.ಐ.ಶ್ರೀಜಿತ್ ನೀಡಿದ ದೂರಿನಂತೆ ಜಿಲ್ಲಾ ಪೊಲೀಸ್ ಅಧಿಕಾರಿ ಬಿಜಯ ಭಾರತ್ ರೆಡ್ಡಿಯವರು ಈ ಕ್ರಮ ಕೈಗೊಂಡಿದ್ದಾರೆ.
ಕುಂಬಳೆ ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಪಿ.ಎಂ.ಅಬ್ದುಲ್ ಸಲಾಂ, ಎ.ಕೆ.ವಿನೋದ್ ಕುಮಾರ್, ಲಿಜೇಶ್, ಸಿವಿಲ್ ಪೊಲೀಸ್ ಅಧಿಕಾರಿಗಳಾದ ಎ.ಎಂ.ಮನು, ಎಂ.ಕೆ.ಅನೂಪ್, ಚಾಲಕ ಕೃಷ್ಣಪ್ರಸಾದ್ ಎಂಬಿವರು ಸಸ್ಪೆಂಡ್ ಗೀಡಾದ ಅಧಿಕಾರಿಗಳು.
ಒಂದು ತಿಂಗಳ ಹಿಂದೆ ಮರಳು ಸಾಗಾಟದ ವೇಳೆ ಟಿಪ್ಪರ್ ಸಹಿತ ಮೊಯ್ದೀನ್ ಎಂಬಾತನನ್ನು ಬಂಧಿಸಲಾಗಿತ್ತು. ಈತನ ಮೊಬೈಲು ವಶಪಡಿಸಿದ ಪೊಲೀಸರು ತಪಾಸಣೆ ನಡೆಸಿದಾಗ 6 ಮಂದಿ ಪೊಲೀಸರ ವಾಟ್ಸಾಪ್ ಮೆಸೇಜ್, ಕರೆ ಮಾಡಿದ ಮಾಹಿತಿ ತಿಳಿಯಿತು. ಅದರಂತೆ ಕುಂಬಳೆ ಎಸ್.ಐ.ಶ್ರೀಜಿತ್ ಅವರು ಮೇಲಧಿಕಾರಿಗಳಿಗೆ ವರದಿ ಮಾಡಿದರು. ಈ ವರದಿಯ ಆಧಾರದಲ್ಲಿ ಕ್ರಮ ಉಂಟಾಗಿದೆ
0 Comments