Ticker

6/recent/ticker-posts

ಕುಡ್ತಮುಗೇರ್ ನಲ್ಲಿ ಬೈಕ್ ಗೆ ಹಂದಿ ಗುದ್ದಿ ಬಾಡೂರು ನಿವಾಸಿಯಾದ ಸವಾರನಿಗೆ ಗಂಭೀರ ಗಾಯ


ವಿಟ್ಲ : ಸಾಲೆತ್ತೂರು ಬಳಿಯ ಕುಡ್ತಮುಗೇರ್ ಕುದ್ರಿಯ ರಸ್ತೆಯಲ್ಲಿ ಬೈಕೊಂದಕ್ಕೆ ಹಂದಿ ಅಡ್ಡ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಪೆರ್ಲ ಸಮೀಪದ ಬಾಡೂರು ನಿವಾಸಿ ಮಲೇಶ್ ಪೂಜಾರಿ ಎಂಬವರು ಕಾಲಿಗೆ ಗಂಭೀರ ಗಾಯಗಳೊಂದಿಗೆ ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರು ಶನಿವಾರ ರಾತ್ರಿ ಗಂಟೆ 8 ರ ಸುಮಾರಿಗೆ ಕರ್ತವ್ಯ ಮುಗಿಸಿ ಬಾಡೂರಿನಿಂದ ತನ್ನ ಪತ್ನಿಯ ಮನೆಗೆ ತೆರಳುವ ನಡುವೆ ಹಂದಿ ದಾಳಿಗೊಳಗಾಗಿದ್ದಾರೆ. ಬೈಕಿಗೂ ಹಾನಿಯಾದ ಬಗ್ಗೆ ತಿಳಿದು ಬಂದಿದೆ.ಈ ಪ್ರದೇಶದಲ್ಲಿ ಕಾಡುಹಂದಿಗಳ ಉಪಟಳ ತೀವ್ರವಾಗಿದ್ದು ವಾಹನ‌ ಸವಾರರಿಗೆ ಭೀತಿಯುಕ್ತ ವಾತವರಣವಾಗಿದೆ.

Post a Comment

0 Comments