Ticker

6/recent/ticker-posts

ಪತ್ನಿಯ ನಾಪತ್ತೆಯಿಂದ ಮನನೊಂದು ಪತಿ ಆತ್ಮಹತ್ಯೆ; ಪತಿಯ ಅಂತ್ಯಸಂಸ್ಕಾರದ ಬೆನ್ನಿಗೆ ಪತ್ನಿಯೂ ಪ್ರತ್ಯಕ್ಷ


 ಪತ್ನಿಯ ನಾಪತ್ತೆಯಿಂದಾಗಿ‌ ಮನನೊಂದು ಪತಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಪತಿಯ ಮೃತದೇಹದ ಅಂತ್ಯಸಂಸ್ಕಾರ ನಡೆಸಿದ ಕೂಡಲೇ ಪೊಲೀಸರ ತನಿಖೆಯಲ್ಲಿ ಪತ್ನಿಯೂ ಪತ್ತೆಯಾಗಿದ್ದಾಳೆ.

  ಕಾಯಂಕುಳಂ ಕಣ್ಣುರುಳ್ಳಿ ನಿವಾಸಿ ವಿನೋದ್ ಎಂಬವರ ಪತ್ನಿ ರಂಜಿನಿ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದಳು.  ರಂಜಿನಿಗೆ ಕುಟುಂಬಶ್ರೀ ಯುನಿಟ್ ಮೂಲಕ 3  ಲಕ್ಷ ರೂ ಸಾಲ ಪಡೆದಿದ್ದು ಮರುಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಜೂನ್ 11 ರಂದು ಬೆಳಗ್ಗೆ ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಹಿಂತಿರುಗಿರಲಿಲ್ಲ. ಪತ್ನಿ ಮರಳಿ ಬರುವಂತೆ ಸಾಮಾಜಿಕ ಮಾಧ್ಯಮದಲ್ಲಿ ಪತಿ ವಿನೋದ್ ವಿಡಿಯೊ ಮೂಲಕ ವಿನಂತಿಸಿದ್ದನು. ಅಲ್ಲದೆ ಪೊಲೀಸರಿಗೂ ದೂರು ನೀಡಿದ್ದನು. ಎರಡು ತಿಂಗಳಾದರೂ ಆಕೆ ಹಿಂತಿರುಗದ ಹಿನ್ನೆಲೆಯಲ್ಲಿ ವಿನೋದ್ ನೇಣು ಬಿಗಿದು ಆತ್ಮಹತ್ಯೆಗೈದಿದ್ದನು.‌ ವಿನೋದ್‌ನ ಅಂತ್ಯಸಂಸ್ಕಾರದ ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ರಂಜಿನಿಯನ್ನು ಕಣ್ಣೂರಿನ ಮನೆಯೊಂದರಿಂದ ಪತ್ತೆಹಚ್ಚಲಾಯಿತು. ಆಕೆ ಸಾಲ ತೀರಿಸಲು ಕಣ್ಣೂರಿನ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳೆಂದು ಪೊಲೀಸರು ತಿಳಿಸಿದ್ದಾರೆ

Post a Comment

0 Comments