Ticker

6/recent/ticker-posts

ಮಂಗಳೂರಿನಿಂದ ಕೂತುಪರಂಬಕ್ಕೆ ಸಾಗಿಸುತ್ತಿದ್ದ 215 ಕಿಲೊ ತಂಬಾಕು ಉತ್ಪನ್ನಗಳ ವಶ, ಇಬ್ಬರ ಬಂಧನ


 ಮಂಜೇಶ್ವರ: ಮಂಗಳೂರಿನಿಂದ ಕೂತುಪರಂಬಕ್ಕೆ ಸಾಗಿಸುತ್ತಿದ್ದ 215 ಕಿಲೊ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶ ಪಡಿಸಿರುವ ಎಕ್ಸೈಸ್ ಅಧಿಕಾರಿಗಳು ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ. ವಡಗರ ತೈಕಾಟ್ ನಿವಾಸಿ ಅಫ್ಸಲ್(31), ತಲಶೇರಿ ನಿವಾಸಿ ಅಶ್ರಫ್(40) ಬಂಧಿತ ಆರೋಪಿಗಳು. 
ಇಂದು (ಬುದವಾರ) ಬೆಳಗ್ಗೆ 5 ಗಂಟೆಯ ವೇಳೆ ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ನಡೆಸಿದ ವಾಹನ ಪರಿಶೋಧನೆಯಲ್ಲಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಯಿತು. 
ಎಕ್ಸೈಸ್ ಇನ್ಸ್ಪೆಕ್ಟರ್ ಬಿ.ಆದರ್ಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇತರರಾದ ವಿಜಯರಾಜ್, ಸಂತೋಷ್ ಕುಮಾರ್, ಮಂಜುನಾಥ, ಅಬ್ದುಲ್ ಅಸೀಸ್, ಪ್ರಭಾಕರ, ಜನಾರ್ಧನ ಮೊದಲಾದವರು ಭಾಗವಹಿಸಿದರು. ಓಣಂ ಸ್ಪೆಶಲ್ ಡ್ರೈವ್ ಅಂಗವಾಗಿ ಕಾರ್ಯಾಚರಣೆ ನಡೆದಿದೆ.

Post a Comment

0 Comments