Ticker

6/recent/ticker-posts

ರಬ್ಬರ್ ಟಾಪಿಂಗ್ ಕಾರ್ಮಿಕರ ಮೇಲೆ‌ ಕಾಡಾನೆ ದಾಳಿ, ಓರ್ವ ಮೃತ್ಯು


 ಇಡುಕ್ಕಿ: ಕಾಡಾನೆ ದಾಳಿಗೆ ರಾಜ್ಯದಲ್ಲಿ ಮತ್ತೆ ಓರ್ವರು ಬಲಿಯಾಗಿದ್ದಾರೆ.‌ಕಾಞಿರಪಳ್ಳಿ ಬಳಿಯ ಪುರುಷೋತ್ತಮನ್(64) ಮೃತಪಟ್ಟ ವ್ಯಕ್ತಿ. ಇಂದು (ಮಂಗಳವಾರ) ಬೆಳಗ್ಗೆ 10.30 ರ ವೇಳೆ ಈ ದಾರುಣ ಘಟನೆ ನಡೆದಿದೆ. ಪುರುಷೋತ್ತಮನ್ ಹಾಗೂ ಪುತ್ರ ಸೇರಿ ರಬ್ಬರ್ ಟಾಪಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ ಕಾಡಾನೆ ದಾಳಿ ಮಾಡಿದೆ. ಪುತ್ರ ಬೊಬ್ಬಿಟ್ಟು ಓಡಿ ತಪ್ಪಿಸಿಕೊಂಡರೆ, ಪುರುಷೋತ್ತಮನ್ ಓಡುವ ವೇಳೆ ಜಾರಿ ಬಿದ್ದರೆನ್ನಲಾಗಿದೆ. ಕಾಡಾನ್ ಇವರ ಮೇಲೆ ಎರಗಿದ್ದು ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಇದೇ ಸ್ಥಳದಲ್ಲಿ ಕಾಡಾನೆ ದಾಳಿ ನಡೆಸಿ ಮಹಿಳೆ ಮೃತಪಟ್ಟಿದ್ದರು.

Post a Comment

0 Comments