ಬದಿಯಡ್ಕ :ಬಂಟರ ಸಂಘದ ಆಶ್ರಯದಲ್ಲಿ ಆ. 3ಕ್ಕೆ ಬಂಟೆರೆ ಆಟಿದ ಕೂಟ ಕಾರ್ಯಕ್ರಮ ಜರಗಲಿದೆ.ಬದಿಯಡ್ಕದ ವಳಮಲೆ ಇರಾ ಸಭಾ ಭವನ ಬೆಳಗ್ಗೆ 9 ಗಂಟೆಯಿಂದ ವಿವಿಧ ಸ್ಪರ್ಧೆಗಳು ಆರಂಭಗೊಳ್ಳಲಿದೆ.
ಕೊಡುಗೈದಾನಿ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಕಾರ್ಯಕ್ರಮ ಉದ್ಘಾಟಿಸುವರು.ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸುವರು.ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮುಂಡಪ್ಪಳ ಇದರ ಆಡಳಿತ ಮೊತ್ತೇಸರ ಕೆ.ಕೆ.ಶೆಟ್ಟಿ ಕುತ್ತಿಕ್ಕಾರು,ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ, ಚಂದ್ರಹಾಸ ರೈ ಪೆರಡಾಲಗುತ್ತು,ಕುಂಬಳೆ ಫಿರ್ಕ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಬಜದಗುತ್ತು ಮುಖ್ಯ ಅತಿಥಿಗಳಾಗಿರುವರು.
ದೇವಿಪ್ರಸಾದ್ ಶೆಟ್ಟಿ ಆಟಿ ಆಚರಣೆ ಬಗ್ಗೆ ಉಪನ್ಯಾಸಗೈಯುವರು.ಪ್ರದೀಪ್ ಕುಮಾರ್ ಶೆಟ್ಟಿ ಬೇಳ,ಅಶೋಕ್ ರೈ ಕೊರೆಕ್ಕಾನ,ಜಗನ್ನಾಥ ರೈ ಪೆರಡಾಲಗುತ್ತು, ಬಾಲಕೃಷ್ಣ ಶೆಟ್ಟಿ ಕಡಾರು,ಶುಭಲತ ರೈ,ಜಗನ್ನಾಥ ರೈ ಕೊರೆಕ್ಕಾನ, ಹರಿಪ್ರಸಾದ್ ರೈ ಸ್ಕಂದ,ರವೀಂದ್ರನಾಥ್ ಶೆಟ್ಟಿ ವಳಮಲೆ, ಗಿರೀಶ್ ರೈ ವಳಮಲೆ, ದಯಾನಂದ ರೈ ಮೇಗಿನ ಕಡಾರು, ಅಶ್ವಿನಿ ಪ್ರದೀಪ್ ಶೆಟ್ಟಿ ಭಾಗವಹಿಸುವರು.ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ವಿದ್ಯಾರ್ಥಿವೇತನ ಮಧ್ಯಾಹ್ನ ಆಟ ತಿಂಗಳ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನ ಜರಗಲಿದೆ.
0 Comments