ಬದಿಯಡ್ಕ : ಚಿತ್ತಾಕರ್ಷಕ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಆ.17ರಂದು ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ, ಶಕ್ತಿಪಂಚಾಕ್ಷರಿ ಯಾಗಕ್ಕೆ ಸಿದ್ಧತೆ ಅಂತಿಮ ಹಂತದಲ್ಲಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಅಂತಿಮ ಹಂತವನ್ನು ತಲುಪುತ್ತಿದೆ. ಕ್ಷೇತ್ರದ ಶಕ್ತಿಕೇಂದ್ರವೆನಿಸುವ ಗರ್ಭಗುಡಿಯ ಹಾಗೂ ಅಂಗಣದ ನವೀಕರಣಗಳಿಗೆ ಮುನ್ನುಡಿಯಾಗಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ, ಶಕ್ತಿಪಂಚಾಕ್ಷರಿ ಯಾಗ ಹಮ್ಮಿಕೊಳ್ಳಲಾಗಿದೆ.ಇದರ ಅಂಗವಾಗಿ ಆ.15ಕ್ಕೆ ಸಂಜೆ 6ಗಂಟೆಯಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಂತ ಜರಗಲಿದೆ. ಆ.16ಕ್ಕೆ ಶನಿವಾರ ಬೆಳಿಗ್ಗೆ ಗಂಟೆ 5.00ರಿಂದ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ತತ್ವಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ತತ್ವಕಲಶಾಭಿಷೇಕ ಜೀವೋದ್ವಾಸನೆ, ಜೀವ ಕಲಶ, ಶಯ್ಯೋನ್ನಯನ. ಮಹಾ ಪೂಜೆ,ಸಂಜೆ 6 ಗಂಟೆಯಿಂದ ಧ್ಯಾನಧಿವಾಸ, ಅಧಿವಾಸ ಹೋಮ, ಕುಭೇಶಕರ್ಕರೀ ಪೂಜೆ, ಪರಿಕಲಶ ಪೂಜೆ, ಬ್ರಹ್ಮಕಲಶ ಪೂಜೆ, ಮಹಾ ಪೂಜೆ ಜರಗಲಿದೆ.
ಆ.17ಕ್ಕೆ ಆದಿತ್ಯವಾರ ಪ್ರಾತ:ಕಾಲ ಗಂಟೆ 3ಕ್ಕೆ ಗಣಪತಿ ಹೋಮ, ಪ್ರತಿಷ್ಠಾಪಾಣಿ ಪ್ರಾತ:ಕಾಲ 4.09 ರಿಂದ 4.45ರ ಕರ್ಕಾಟಕ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ, ಕಲಶಾಭಿಷೇಕ.ಬೆಳಗ್ಗೆಗಂಟೆ 9ರಿಂದ: ಶಕ್ತಿ ಪಂಚಾಕ್ಷರಿ ಯಾಗ ಪ್ರಾರಂಭ.ಮಧ್ಯಾಹ್ನ 11.30ಕ್ಕೆ ಯಾಗ ಪೂರ್ಣಾಹುತಿ.11.45 ಧಾರ್ಮಿಕ ಸಭೆ ಮಂಗಳೂರು ಉದ್ಯಮಿ ಶ್ರೀ ಗಿರಿಧರ ಶೆಟ್ಟಿ ನೈಮಗೇರು ಮಂಗಳೂರು ಉದ್ಘಾಟಿಸುವರು.ಉದನೇಶ್ವರ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ವಸಂತ ಪೈ ಅಧ್ಯಕ್ಷತೆವಹಿಸುವರು.ಕ್ಷೇತ್ರ ತಂತ್ರಿವರ್ಯ ರವೀಶ ತಂತ್ರಿ ಕುಂಟಾರು ಅನುಗ್ರಹ ಭಾಷಣ ಮಾಡುವವರು.ವಿವಿಧ ಗಣ್ಯರು ಉಪಸ್ಥಿತರಿರುವರು
ಮಧ್ಯಾಹ್ನ 12.30 ಗಂಟೆಗೆ ಶ್ರೀ ದೇವರಿಗೆ ಮಹಾ ಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ಜರಗಲಿದೆ.
0 Comments