Ticker

6/recent/ticker-posts

ಕುರೆಡ್ಕದಲ್ಲಿ ಸಾರ್ವಜನಿಕ ಶೌಚಾಲಯ ಹಸ್ತಾಂತರ


ಪೆರ್ಲ :  ಎಣ್ಮಕಜೆ ಗ್ರಾಮ ಪಂಚಾಯತಿನ 16ನೇ ವಾರ್ಡಿನಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ಹಸ್ತಾಂತರಿಸಲಾಯಿತು. ಈ ಬಗ್ಗೆ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಪಂಚಾಯತ್ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ವಾರ್ಡ್ ಸದಸ್ಯೆ ಸೌದಾಭಿ ಹನೀಫ್ ಅಧ್ಯಕ್ಷತೆವಹಿಸಿದರು. ಉದಯ ಮಾಸ್ತರ್ ಖಂಡಿಗೆ,ಹರೀಶ ಸೇರಾಜೆ, ಮೊಹಮ್ಮದ್ ಹನೀಫ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳದಾನಗೈದ ಗೋಪಾಲಕೃಷ್ಣ ಭಟ್ ನಾಗೋಡಿ,ಕಣ್ಣೂರು ವಿವಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಗಳಿಸಿದ ಸ್ವಾತಿ ಬಿ.ಕೆ.ಅವರನ್ನು ಅಭಿನಂದಿಸಲಾಯಿತು. ಸಲಾವುದ್ದಿನ್ ಮಾಸ್ತರ್ ನಿರೂಪಿಸಿದರು
.

Post a Comment

0 Comments