Ticker

6/recent/ticker-posts

ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸಾರ್ವಭೌಮರ 354 ನೇ ಅರಾಧನಾ ಮಹೋತ್ಸವ

 


ಕಾಸರಗೋಡು : ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಪೂಜ್ಯ  ಶ್ರೀ ರಾಘವೇಂದ್ರ ಸಾರ್ವಭೌಮರ 354 ನೇ ಅರಾಧನಾ ಮಹೋತ್ಸವವು ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಇವರ ನೇತೃತ್ವದಲ್ಲಿ ಜರಗಿತು. ಬೆಳಿಗ್ಗೆ ಗಣಪತಿ ಹೋಮ, ಗುರುಗಳಿಗೆ ಪಂಚಾಮೃತ ಅಭಿಷೇಕ, ಪಾದಪೂಜೆ, ವಿಶೇಷ ಹೂವಿನ ಪೂಜೆ, ಶ್ರೀರಂಗ ಪೂಜೆ ಹಾಗೂ ರಾತ್ರಿ ಸಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ವಿವಿಧ ಕಾರ್ಯಕ್ರಮದಂಗವಾಗಿ ಪದ್ಮಪ್ರಿಯ ಮಹಿಳಾ ಭಜನಾ ಸಂಘದಿಂದ ಭಜನಾ ಸಂಕೀರ್ತನೆ, ಕೀರ್ತಿಶೇಷ ಮಧೂರು ಪದ್ಮನಾಭ ಸರಳಾಯ ಅವರ ಶಿಷ್ಯವೃಂದದವರಿಂದ ಸಂಗೀತ ಕಛೇರಿ, ಉಳಿಯ ಧನ್ವಂತರಿ ಯಕ್ಷಗಾನ ಕಲಾ ಸಂಘದವರಿಂದ ಯಕ್ಷಗಾನ ತಾಳಮದ್ದಳೆ ಜರಗಿತು. ಕ್ಷೇತ್ರ ಸಮಿತಿ ಪ್ರಮುಖರಾದ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ  ಕೆ.ಎನ್. ರಾಮಕೃಷ್ಣ ಹೊಳ್ಳ, ಕೆ.ವಿ.ಶ್ರೀನಿವಾಸ ಹೊಳ್ಳ, ತುಕರಾಮ ಆಚಾರ್ಯ ಕೆರೆಮನೆ, ಪ್ರಮೋದ್ ಕುಮಾರ್, ಪುರಂದರ ಶೆಟ್ಟಿ, ಕೆ.ವಿ.ತಿರುಮಲೇಶ್ ಹೊಳ್ಳ, ಕೆ.ವಿ. ಶೇಷಾದ್ರಿ ಹೊಳ್ಳ, ರವಿ ಕೇಸರಿ, ಕಿಶೋರ್ ಕುಮಾರ್, ವಸಂತ್ ಕೆರೆಮನೆ ಮಾತೃ ಸಮಿತಿಯ ರೂಪಕಲಾ ಹೊಳ್ಳ, ಶ್ರೀದೇವಿ ಎಸ್ ರಾವ್, ಸವಿತಾ ಕಿಶೋರ್, ಸೌಮ್ಯ ಶಂಕರ, ಪ್ರೇಮ ಪುರಂದರ, ವಿಜಯ ಶೆಟ್ಟಿ, ಅರುಣಾ ಕುಮಾರಿ, ಗೀತಾ ತುಕರಾಮ, ಸಿಂದೂ ಭಾಸ್ಕರ, ಬಿಂದು ರವಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪ್ರಸಾದ ಭೋಜನ ಸ್ವೀಕರಿಸಿ ಪುನೀತರಾದರು.

Post a Comment

0 Comments