Ticker

6/recent/ticker-posts

ವಾಹನ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿ ಹೊಳೆಗೆ ಹಾರಿದ ಕಾಪಾ ಪ್ರಕರಣದ ಆರೋಪಿ ಮೃತ್ಯು


 ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ತಪ್ಪಿಸಿಕೊಂಡು ಹೊಳೆಗೆ ಹಾರಿದ ಕಾಪಾ ಪ್ರಕರಣದ ಆರೋಪಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ತಲಶೇರಿ ಪುದುವಾಚೇರಿ ನಿವಾಸಿ ಅಬ್ದುಲ್ ಹಮೀದ್(30 ಮೃತಪಟ್ಟ ಆರೋಪಿ. ಇರಿಟ್ಟಿ- ವಿರಾಜಪೇಟೆ ಅಂತರಾಜ್ಯ ಹೆದ್ದಾರಿಯ ಕಾಟ್ಟುಪುಯ ಎಂಬಲ್ಲಿ ಘಟನೆ ನಡೆದಿದೆ. ಕರ್ಣಾಟಕ ಭಾಗದಿಂದ ಹೇರಳವಾಗಿ ಲಹರಿ ವಸ್ತುಗಳ ಸಾಗಾಟ ನಡೆಯುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ವಾಹನ ತಪಾಸಣೆ ನಡೆದಿತ್ತು. ಈ ವೇಳೆ ವಾಹನದಲ್ಲಿದ್ದ ಅಬ್ದುಲ್ ಹಮೀದ್ ತಪ್ಪಿಸಿಕೊಂಡು ಓಡಿ ಹೊಳೆಗೆ ಹಾರಿದನೆನ್ನಲಾಗಿದೆ. ಹಾಳೆಯಲ್ಲಿ ಪ್ರವಾಹ ಇದ್ದ ಕಾರಣ ಅಬ್ದುಲ್ ಹಮೀದ್ ಮುಳುಗಿ ಮೃತಪಟ್ಟನೆನ್ನಲಾಗಿದೆ. ಈತನ ಹೆಸರಿನಲ್ಲಿ 12 ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳಿವೆ.

Post a Comment

0 Comments