Ticker

6/recent/ticker-posts

ತ್ರಿಶೂರಿನಲ್ಲಿ‌ ಕೇಂದ್ರ ಸಚಿವ ಸುರೇಶ್ ಗೋಪಿ ಕಚೇರಿಗೆ ಸಿಪಿಎಂ‌ ಹಾನಿ; ಕಾಸರಗೋಡಿನಲ್ಲಿ ಬಿಜೆಪಿ ಪ್ರತಿಭಟನೆ


 

ಕಾಸರಗೋಡು: ತ್ರಿಶೂರಿನಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿಯವರ ಕಚೇರಿಗೆ ಹಾನಿಗೊಳಿಸಿದ ಸಿಪಿಎಂ ಕ್ರಮವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾಸರಗೋಡಿನಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಉದ್ಘಾಟಿಸಿದರು. 


 ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸುರೇಶ್ ಗೋಪಿಯವರ ಕಚೇರಿಯ ಮೇಲೆ ಆಕ್ರಮಣ ಸಹಿಸೆವು ಎಂದು ಅಶ್ವಿನಿ ಎಂ.ಎಲ್.ಹೇಳಿದರು. ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್, ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನಿಲ್, ಮನುಲಾಲ್ ಮೇಲತ್,  ಇತರರಾದ ಸವಿತ ಟೀಚರ್, ಪ್ರಮಿಳಾ‌ ಮಜಲ್,  ಗುರುಪ್ರಸಾದ್ ಪ್ರಭು, ಶ್ರೀಧರ ಕೂಡ್ಲು, ಶೈನಿ ಮೋಳ್, ದಯಾನಂದ ಪೂಜಾರಿ, ವರಪ್ರಸಾದ್ ಕೋಟಕಣಿ, ಸುಕುಮಾರ ಕುದ್ರೆಪಾಡಿ, ಮಾಧವ ಮಾಸ್ತರ್, ಜನಪ್ರತಿನಿಧಿಗಳು ಭಾಗವಹಿಸಿದರು. ಪಕ್ಷದ ನಗರ ಕಾರ್ಯಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಕೊನೆಗೊಂಡಿತು

Post a Comment

0 Comments