Ticker

6/recent/ticker-posts

ನಾಳೆ ಸವಿಹೃದಯದ ಕವಿಮಿತ್ರರು ವೇದಿಕೆಯಿಂದ ಕೂಡ್ಲಿನಲ್ಲಿ 'ಆಟಿ' ಅಕ್ಷರ ಕೂಟ

 


ಕಾಸರಗೋಡು: ಪೆರ್ಲದ ಸವಿಹೃದಯದ ಕವಿಮಿತ್ರರು ವೇದಿಕೆಯ ವತಿಯಿಂದ ಆಷಾಢ ಮಾಸದ ವಿಶೇಷತೆಯಾಗಿ'ಆಟಿ' ಅಕ್ಷರ ಕೂಟ ವೈವಿಧ್ಯಮಯ ಕಾರ್ಯಕ್ರಮ ಆ.10ಕ್ಕೆ ರವಿವಾರ ಬೆಳಗ್ಗೆ ಗಂಟೆ 9ರಿಂದ ಕಾಸರಗೋಡಿನ ಕೂಡ್ಲು ಗಂಗೇ ರೋಡಿನ ಲಕ್ಷ್ಮೀ ಗೋವಿಂದ ನಿವಾಸದಲ್ಲಿ ನಡೆಯಲಿದೆ.

ಇದರ ಅಂಗವಾಗಿ ಬೆಳಗ್ಗೆ 9 ರಿಂದ 10.30ರ ತನಕ : ಶ್ರೀ ಗಣೇಶ ಮಹಿಳಾ ಭಜನಾ ಮಂಡಳಿ, ಬೆದ್ರಂಪಳ್ಳ ಇವರಿಂದ ಭಜನೆ,ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಕಲಬುರ್ಗಿ ಆಕಾಶವಾಣಿ ಕೇಂದ್ರದ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ| ಸದಾನಂದ ಪೆರ್ಲ ಉದ್ಘಾಟಿಸುವರು. ಕ.ಸಾ.ಪ ಕಾರ್ಯಕಾರೀ ಸಮಿತಿ ಸದಸ್ಯೆ ಆಯಿಶಾ ಎ.ಎ. ಪೆರ್ಲ ಅಧ್ಯಕ್ಷತೆ ವಹಿಸುವರು.ಆಶಾ ದಿಲೀಪ್ ಸುಳ್ಯಮೆ ಆಟಿ ಆಚರಣೆ ಬಗ್ಗೆ ವಿಶೇಷ ಉಪನ್ಯಾಸ ನೀಡುವರು.

ಡಾ| ಕಿಶೋರ್ ಕುಮಾರ್ ರೈ, ಶೇಣಿ ಮುಖ್ಯ ಅತಿಥಿಗಳಾಗಿರುವರು. ಈ ಸಂದರ್ಭದಲ್ಲಿ ಹಿರಿಯ ಹೋಟೆಲ್ ಉದ್ಯಮಿ ಗೋವಿಂದ ನಾಯ್ಕ  ಅರೆಮಂಗಿಲ ಅವರಿಗೆ ಗೌರವಾರ್ಪಣೆ ಜರಗಲಿದೆ.ಪತ್ರಕರ್ತ, ಸಂಘಟಕ ಜಯ ಮಣಿಯಂಪಾರೆ ಸನ್ಮಾನಿತ ಪರಿಚಯಿಸುವರು.

ಸವಿಹೃದಯದ ಕವಿಮಿತ್ರರು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ ಪ್ರಾಸ್ತವನೆಗೈಯಲಿರುವರು. ನವ್ಯಶ್ರೀ ಸ್ವರ್ಗ, ಬೇಬಿ ಜಯರಾಂ, ಜಯಪ್ರಕಾಶ್, ಮಣಿಯಂಪಾರೆ ಭಾಗವಹಿಸುವರು.ಬಳಿಕ ಗೀತಾ ಗಾಯನ, ಕವಿ ಸಮಯ ಕಾರ್ಯಕ್ರಮ ಜರಗಲಿದೆ.ಬಹುಭಾಷಾ ಕವಿ -ಕಾವ್ಯ - ಸಂವಾದ ಕಾರ್ಯಕ್ರಮದಲ್ಲಿ ರಘು ಇಡ್ಕಿದು ಅವರ ಅಧ್ಯಕ್ಷತೆಯಲ್ಲಿ ರಾಜಾರಾಮ ವರ್ಮ ವಿಟ್ಲ ಚಾಲನೆ ನೀಡುವರು.ದಿವ್ಯಾ ಗಟ್ಟಿ ಪರಕ್ಕಿಲ ಸ್ವಾಗತಿಸುವರು. ನರಸಿಂಹ ಭಟ್, ಏತಡ್ಕ ( ಕನ್ನಡ), ಪ್ರೇಮ ಕಿಶೋರ್, ಪುತ್ತೂರು (ಕುಂದ ಕನ್ನಡ ), ಸುಶೀಲ ಪದ್ಯಾಣ (ಹವ್ಯಕ), ಗಣೇಶ್ ಪೈ ಬದಿಯಡ್ಕ (ಕೊಂಕಣಿ), ಜೋತ್ಸಾ ಎಂ.ಕಡಂದೇಲು (ಕರಾಡ), ಹಿತೇಶ್ ಕುಮಾರ್ ಎ. (ಮರಾಟಿ),ರವೀಂದ್ರನ್ ಪಾಡಿ (ಮಲೆಯಾಳ), ವಿಜಯ ಕಾನ (ಸಂಸ್ಕೃತ), ವಿಶ್ವನಾಥ ಕುಲಾಲ್, ಮಿತ್ತೂರು (ತುಳು),ಪ್ರೇಮ ಆರ್ ಶೆಟ್ಟಿ ಮೂಲ್ಕಿ (ಹಿಂದಿ)ಭಾಗವಹಿಸಲಿದ್ದಾರೆ. ಅಪೂರ್ವ ಕಾರಂತ ನಿರೂಪಿಸುವರು.ಸಂಜೆ 4 ಗಂಟೆಯಿಂದ "ಆಟಿ' ಹಾಸ್ಯ - ಲಾಸ್ಯ - ಗಾಯನ - ನರ್ತನ ಕಾರ್ಯಕ್ರಮ ಜರಗಲಿದೆ.

Post a Comment

0 Comments