Ticker

6/recent/ticker-posts

ಕಿಡ್ನಿ ಸಂಬಂಧ ಖಾಯಿಲೆಯಿಂದ ಬಳಲುತ್ತಿದ್ದ ಚಾಲಕ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮೃತ್ಯು


 ಮುಳ್ಳೇರಿಯ: ಕಿಡ್ನಿ ಸಂಬಂಧ ಖಾಯಿಲೆಯಿಂದ ಬಳಲುತ್ತಿದ್ದ ಚಾಲಕ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಇರಿಯಣ್ಣಿ ಬೇಪ್ ನಿವಾಸಿ ಜಯಚಂದ್ರನ್(55) ಮೃತಪಟ್ಟ ವ್ಯಕ್ತಿ. ಈ ಹಿಂದೆ ಘನ ವಾಹನಗಳ ಚಾಲಕನಾಗಿದ್ದ ಜಯಚಂದ್ರನ್, ಅಸೌಖ್ಯದ ನಂತರ ಇರಿಯಣ್ಣಿಯಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದರು. ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪೆರಿಯಾರಂ‌ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು ಅಲ್ಲಿ ಅವರು ಕೊನೆಯುಸಿರೆಳೆದರು. ಮೃತರು ತಂದೆ ಶಂಕರ,ತಾಯಿ ನಾರಾಯಣಿ, ಪತ್ನಿ ನಿಷ, ಮಕ್ಕಳಾದ ಜ್ಯೋತಿಷ್ಚಂದ್ರನ್, ಜಿತಿಚಂದ್ರನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments