Ticker

6/recent/ticker-posts

Ad Code

ಅಯ್ಯಪ್ಪ ಭಕ್ತರು ಸಂಚರಿಸುತ್ತಿದ್ದ ಬಸ್ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಚಾಲಕ ಸಹಿತ ಮೂವರ ಸಾವು

 


ಅಯ್ಯಪ್ಪ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬಸ್ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ, ಆಟೋರಿಕ್ಷಾದಲ್ಲಿ ಸಂಚರಿಸುತ್ತಿದ್ದ ಇಬ್ಬರು ಪ್ರಯಾಣಿಕರ ಸಹಿತ ಮೂವರು ಮೃತಪಟ್ಟ ಘಟನೆ  ಕೊಲ್ಲಂ ಜಿಲ್ಲೆಯ ಅಂಚಲ್‌ ಎಂಬಲ್ಲಿಂದ ವರದಿಯಾಗಿದೆ.  ಮೃತರನ್ನು ಕರವಲೂರಿನ ನೀಲಮ್ಮಾಳ್ ಪಲ್ಲಿವಾಡಕ್ಕತ್ತಿಲ್‌ನ ಶ್ರುತಿಲಕ್ಷ್ಮಿ (16), ತಜಮೇಲ್‌ನ ಜಯಜ್ಯೋತಿ ಭವನದ ಜ್ಯೋತಿಲಕ್ಷ್ಮಿ (21) ಮತ್ತು ಚೂರಕುಲಂನ ತಝಮೇಲ್‌ನ ಅಕ್ಷಯ ಭವನದ ಆಟೋ ಚಾಲಕ ಅಕ್ಷಯ್ (23) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಅಂಚಲ್-ಪುನಲೂರು ಮಾರ್ಗದ ಮಾವಿಲ ಎಂಬಲ್ಲಿ ಈ ದುರ್ಘಟನೆ ನಡೆದಿದೆ.  ಆಂಧ್ರಪ್ರದೇಶದ ಅಯ್ಯಪ್ಪ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಂಚಲ್ ನಿಂದ ಪುನಲೂರಿಗೆ ಹೋಗುತ್ತಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿತ್ತು.

Post a Comment

0 Comments