Ticker

6/recent/ticker-posts

Ad Code

ಸುಳ್ಯದ ಯುವಕ ರಸ್ತೆ ಅಪಘಾತಕ್ಕೆ ಬಲಿ

 

ಸುಳ್ಯ: ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕಿದ್ದ ಸುಳ್ಯದ ಯುವಕನೋರ್ವ ಮೈಸೂರಿನ ಮಳವಳ್ಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಸುಳ್ಯ ಉಬರಡ್ಕ ಮಿತ್ತೂರು ಗ್ರಾಮದ ಕಲ್ಟಾ‌ರ್ ನಿವಾಸಿ ಶೇಷಪ್ಪನಾಯ್ಕ ಎಂಬವರ ಪುತ್ರ ದೀಕ್ಷಿತ್ (25) ಮೃತಪಟ್ಟವರು. ದೀಕ್ಷಿತ್ ಬೆಂಗಳೂರಿನಿಂದ ಕಂದಡ್ಕದ ಕಲ್ವಾರಿನ ತನ್ನ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮೈಸೂರು ಸಮೀಪದ ಮಳವಳ್ಳಿಯಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ದೀಕ್ಷಿತರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಮೃತಪಟ್ಟಿದ್ದರೆನ್ನಲಾಗಿದೆ.

Post a Comment

0 Comments