Ticker

6/recent/ticker-posts

Ad Code

ಬದಿಯಡ್ಕ ಪಂ.ನಲ್ಲಿ ಖಾಲಿ ಬಿದ್ದಿರುವ ಹುದ್ದೆ‌ ಶೀಘ್ರ ನೇಮಕಾತಿಗೆ ಗ್ರಾ.ಪಂ. ಆಡಳಿತದ ಒತ್ತಾಯ


 ಕಾಸರಗೋಡು: ಬದಿಯಡ್ಕ ಗ್ರಾಮ ಪಂಚಾಯತಿನಲ್ಲಿ ಖಾಲಿ ಬಿದ್ದಿರುವ ಸಿಬಂದಿಗಳ ಹುದ್ದೆಗೆ ಕೂಡಲೇ ನೇಮಕಾತಿ ನಡೆಸಬೇಕು ಎಂದು ಗ್ರಾಮ ಪಂಚಾಯತು ಅಧ್ಯಕ್ಷರಾದ ಶಂಕರ ಡಿ.ಅವರು ಒತ್ತಾಯಿಸಿದ್ದಾರೆ. ಅವರು ಜಿಲ್ಲಾ ಅಸಿಸ್ಟೆಂಟ್  ಡೈರೆಕ್ಟರಿಗೆ ಹಾಗೂ ತಿರುವನಂತಪುರಂ ಪ್ರಿನ್ಸಿಪಲ್ ಡೈರಕ್ಟರಿಗೆ ನೀಡಿದ ಮನವಿಯಲ್ಲಿ ಈ ಬಗ್ಗೆ ಒತ್ತಾಯಿಸಿದರು. ಅಕೌಂಟೆಂಟ್,  ಹೆಡ್ ಕ್ಲರ್ಕ್, ಸೀನಿಯರ್ ಕ್ಲರ್ಕ್, ಯು.ಡಿ.ಕ್ಲರ್ಕ್, ಅಸಿಸ್ಟೆಂಟ್ ಇಂಜಿನಿಯರ್, ಓವರ್ಸಿಯರ್ (2) ಹುದ್ದೆಗಳು ಈಗಾಗಲೇ ಖಾಲಿಯಿದೆ. ಸಿಬಂದಿಗಳು ಇಲ್ಲದ ಕಾರಣದಿಂದಾಗಿ ವಿವಿದ ಅಗತ್ಯಗಳಿಗಾಗಿ ಗ್ರಾಮ ಪಂಚಾಯತಿಗೆ ಆಗಮಿಸುವ ಸಾರ್ವಜನಿಕರು ಬರಿಗೈಯಲ್ಲಿ ಹಿಂತಿರುಗಬೇಕಾಗುತ್ತದೆ. ಜನರು ವಿವಿದ ಪ್ರಮಾಣ ಪತ್ರಗಳಿಗಾಗಿ ಅಲೆದಾಡಬೇಕಾಗುತ್ತದೆ. ಅಸಿಸ್ಟೆಂಟ್ ಇಂಜಿನಿಯರ್, ಓವರ್ಸಿಯರ್ ಇಲ್ಲದ ಕಾರಣ ಸರಕಾರದ ಯೋಜನೆಗಳ ಕಡತಗಳು ಪೂರ್ಣವಾಗುತ್ತಿಲ್ಲ. ಇದರಿಂದಾಗಿ ಅನುದಾನಗಳು ನಷ್ಟವಾಗುತ್ತಿವೆ.ಈ ಹಿನ್ನೆಲೆಯಲ್ಲಿ ಕೂಡಲೇ  ಸಿಬಂದಿಗಳ ನೇಮಕಾತಿ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗ್ರಾಮಪಂಚಾಯತು ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಬ್ಲಾಕ್ ಪಂಚಾಯತು ಸದಸ್ಯ ಮಹೇಶ್ ವಳಕುಂಜ, ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಶೆಟ್ಟಿ ಮೊದಲಾದವರು ಜತೆಗಿದ್ದರು

Post a Comment

0 Comments