ಕಾಸರಗೋಡು ; ಬೇಕಲದ ಪಳ್ಳಿಕೆರೆ ಬೀಚ್ ಫೆಸ್ಟಿವಲ್‌ನಲ್ಲಿ ವೇದನ್ ಅವರ ಸಂಗೀತ ಕಚೇರಿಯ ಜನದಟ್ಟಣೆಯ ಸಮಯದಲ್ಲಿ ರೈಲ್ವೇ ಹಳಿಗೆ ಹೋಗಿದ್ದ ವ್ಯಕ್ತಿಗೆ ರೈಲು ಡಿಕ್ಕಿ ಹೊಡೆದ ದುರ್ಘಟನೆ ನಡೆದಿದೆ. ರೈಲ್ವೇ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಸಾವನ್ನಪ್ಪಿದ್ದಾನೆ. ಮೃತನನ್ನು ಪೊಯಿನಾಚಿಯ ಟ್ರಾವೆಲ್ ಏಜೆನ್ಸಿ ಮಾಲಕರಾಗಿರುವ ಪೊಯಿನಾಚಿ ಪರಂಬದ ಶಿವಂ ಹೌಸ್‌ನ ವೇಣುಗೋಪಾಲನ್ ನಾಯರ್ ಅವರ ಪುತ್ರ ಎಂ ಶಿವಾನಂದನ್ (19) ಎಂದು ಗುರುತಿಸಲಾಗಿದೆ. ಮೃತ ಬಾಲಕ ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ.

0 Comments