ಕಾಸರಗೋಡು : ಕ್ರಿಸ್ಮಸ್ ಕರೋಲ್ ಗುಂಪಿನೊಂದಿಗೆ ಸಕ್ರಿಯವಾಗಿ ಭಾಗವಹಿಸಿದ ನಂತರ ಮನೆಗೆ ಹಿಂತಿರುಗುತ್ತಿದ್ದ ಸ್ನೇಹಿತರೀರ್ವರು ರಸ್ತೆ ಅಪಘಾತಕ್ಕೊಳಗಾದ ಘಟನೆ ವೆಳ್ಳರಿಕುಂಡು ಪೊಲೀಸ್ ಠಾಣಾ ವ್ಯಾಪ್ತಿಯ ಮಾಲೋತ್ನಲ್ಲಿ ನಡೆದಿದೆ. ಬೈಕ್ ನಲ್ಲಿದ್ದ ಮಾಲೋತ್ನ ಮಿಥುಲ್ರಾಜ್ (20) ಮೃತಪಟ್ಟಿದ್ದು ಈತನ ಸ್ನೇಹಿತ ಸಚು ಗಂಭೀರ ಗಾಯಗೊಂಡಿದ್ದಾನೆ. ಬೈಕ್ ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ. ಗಾಯಗೊಂಡ ಸಚು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕ್ರಿಸ್ಮಸ್ ಕರೋಲ್ ಗುಂಪಿನೊಂದಿಗೆ ಸಕ್ರಿಯವಾಗಿ ಭಾಗವಹಿಸಿದ ನಂತರ ಹಿಂತಿರುಗುತ್ತಿದ್ದಾಗ, ಮಿಥುಲ್ ರಾಜ್ ಮತ್ತು ಅವರ ಸ್ನೇಹಿತ ಸವಾರಿ ಮಾಡುತ್ತಿದ್ದ ಬೈಕ್ ಅಪಘಾತಕ್ಕೀಡಾಗಿತ್ತು. ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಸಂಭವಿಸಿದ ಈ ದುರಂತ ನಾಡನ್ನೇ ಶೋಕ ಸಾಗರವಾಗಿಸಿದೆ.

0 Comments