Ticker

6/recent/ticker-posts

Ad Code

ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದಲ್ಲಿ ಡಿ.26ಕ್ಕೆ ಗರ್ಭ ಗುಡಿಯ ದಾರಂದ ಮೂಹೂರ್ತ : ಬಲಿವಾಡು ಕೂಟ

 

ಮುಂಡಿತ್ತಡ್ಕ : ಇತಿಹಾಸ ಪ್ರಸಿದ್ಧ ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದಲ್ಲಿ ಕಿರುಷಷ್ಠಿ ಪ್ರಯುಕ್ತ ಡಿಸೆಂಬರ್ 26ಕ್ಕೆ ಶ್ರೀ ದೇವರಿಗೆ ನವಕ ಅಭಿಷೇಕ, ಪರಿವಾರ ದೈವಗಳು ಹಾಗೂ ನಾಗ  ದೇವರಿಗೆ ತಂಬಿಲ ಸೇವೆ,  ಬಲಿವಾಡು ಕೂಟ ಜರಗಲಿದೆ. ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಭಕ್ತ ಜನ ಸಹಕಾರದೊಂದಿಗೆ ತ್ವರಿತಗತಿಯಲ್ಲಿ ಸಾಗುತ್ತಿದ್ದು ದೇವರು ಬಾಲಾಲಯದಲ್ಲಿ ಇರುವುದರಿಂದ ಈ ವರ್ಷದಲ್ಲಿ ಕಿರುಷಷ್ಠಿ ಉತ್ಸವ ಇರುವುದಿಲ್ಲ ಎಂದು ಕ್ಷೇತ್ರ ಸಮಿತಿ ತಿಳಿಸಿದೆ. ಡಿ.26ಕ್ಕೆ ನಿರ್ಮಾಣ ಹಂತದಲ್ಲಿರುವ ನೂತನ ಶಿಲಾಮಯ ಗರ್ಭ ಗುಡಿಯ ದಾರಂದ ಮೂಹೂರ್ತ ಬೆಳ್ಳಗೆ 10.40 ರ ಒಳಗೆ ಜರಗಲಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

Post a Comment

0 Comments