Ticker

6/recent/ticker-posts

Ad Code

ಬಲೂನ್ ಗೆ ಗ್ಯಾಸ್ ತುಂಬಿಸುವ ಸಿಲಿಂಡರ್ ಸ್ಫೋಟ : ಮಾರಾಟಗಾರ ಸಾವು ಐದು ಜನರಿಗೆ ಗಾಯ


ಮೈಸೂರು: ಮೈಸೂರು ಅರಮನೆಯ ಮುಂಭಾಗದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬಲೂನ್ ಮಾರಾಟಗಾರ ಸಾವನ್ನಪ್ಪಿದ್ದಾನೆ. ಐದು ಜನರು ಗಾಯಗೊಂಡಿದ್ದು, ಮೃತರನ್ನು ಉತ್ತರ ಪ್ರದೇಶದ ಮೂಲದವರಾದ ಸಲೀಂ (40) ಎನ್ನಲಾಗಿದ್ದು, ಗಾಯಗೊಂಡವರನ್ನು  ಬೆಂಗಳೂರು ಮೂಲದ ಲಕ್ಷ್ಮಿ(45),  ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಂಜುಳಾ(29), ಕೋಲ್ಕತ್ತಾ ಮೂಲದ ಶಾಹಿನಾ ಶಬ್ಬಿರ್(54) , ರಾಣೆಬೆನ್ನೂರು ಮೂಲದ ಕೊಟ್ರೇಶ್(54ಮತ್ತು ರಂಜಿತಾ(29) ಎಂಬುದಾಗಿ ಗುರುತಿಸಲಾಗಿದೆ. ಗುರುವಾರ ರಾತ್ರಿ 8:30 ರ ಸುಮಾರಿಗೆ ಅರಮನೆಯ ಜಯಮಾರ್ತಾಂಡ ಗೇಟ್ ಮುಂದೆ ಸ್ಫೋಟ ಸಂಭವಿಸಿದೆ. ಬಲೂನ್‌ಗಳನ್ನು ತುಂಬಲು ಬಳಸುವ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಕ್ರಿಸ್‌ಮಸ್ ರಜಾದಿನವಾದ ಕಾರಣ ಅರಮನೆಯ ಮುಂದೆ ಭಾರೀ ಜನದಟ್ಟಣೆ ಇದ್ದಾಗ ಸಂಭವಿಸಿದ ಈ ಸ್ಫೋಟವು ದೀರ್ಘಕಾಲದವರೆಗೆ ಭೀತಿಯನ್ನುಂಟು ಮಾಡಿತು.

Post a Comment

0 Comments