Ticker

6/recent/ticker-posts

Ad Code

ಕ್ರಿಸ್ ಮಸ್ ಪ್ರಾರ್ಥನೆ ವೇಳೆ ಮನೆ ದರೋಡೆ

ಕಾಸರಗೋಡು: ಮನೆಯವರು  ಚರ್ಚ್‌ಗೆ ಹೋಗಿದ್ದ ಸಂದರ್ಭದಲ್ಲಿ ದರೋಡೆ ನಡೆದ ಘಟನೆ  ಕಾಞಂಗಾಡ್‌ ನಲ್ಲಿ ನಡೆದಿದೆ. ಮನೆಯಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ದಾಖಲೆಗಳನ್ನು ಕದ್ದಿದ್ದಾರೆ ಎಂದು ದೂರು ನೀಡಲಾಗಿದೆ. ಕಾಞಂಗಾಡ್‌ನ ಕುರುಂತೂರಿನ ಪಡನ್ನಕ್ಕಾಡ್‌ನಲ್ಲಿರುವ ಪಿ.ಕೆ. ಜೋಜಿ ಅವರ ಮನೆಯಲ್ಲಿ ಈ ರೀತಿ ದೋಚಲಾಗಿದೆ. ಬುಧವಾರ ಮಧ್ಯರಾತ್ರಿ 12 ಗಂಟೆಯಿಂದ ಗುರುವಾರ ಬೆಳಗಿನ ಜಾವ 2.30 ರ ನಡುವೆ ಈ ದರೋಡೆ ನಡೆದಿದೆ. ಮನೆಯ ಮುಂಭಾಗದ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು ಎರಡು ಪವನ್ ಚಿನ್ನ, ಒಂದು ಬೆಳ್ಳಿ ತಾಯಿತ ಮತ್ತು ಕಪಾಟಿನಲ್ಲಿ ಇರಿಸಲಾಗಿದ್ದ ಇತರ ದಾಖಲೆಗಳನ್ನು ಕದ್ದಿದ್ದಾರೆ ಎಂದು ಹೊಸದುರ್ಗ ಪೊಲೀಸರಿಗೆ ದೂರು ನೀಡಲಾಗಿದೆ. ಎಸ್‌ಐಸಿಪಿ ಜಿಜೇಶ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.

Post a Comment

0 Comments