ದುಬೈ : ಕುಲಾಲ ಪ್ಯಾಮಿಲಿ ದುಬೈ ಯು.ಎ.ಇ ಯ ವತಿಯಿಂದ ಆಯೋಜಿಸಿದ ವಿಹಾರ ಕೂಟ 2025, ದುಬೈಯ ಜಬೀಲ್ ಪಾರ್ಕಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಸುಮಾರು 130 ಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ವಜಾತಿ ಬಾಂಧವರು ಪಾಲುಗೊಂಡರು. ಕುಮಾರಿ ದೇಶ್ನ ಪ್ರವೀಣ್ ಕುಲಾಲ್ ಹಾಗೂ ಧನ್ವಿ ಸಚಿನ್ ಕುಲಾಲ್ ಪ್ರಾರ್ಥನೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದುಬೈಯಲ್ಲಿ ಹಲವು ವರುಷಗಳಿಂದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದುಕೊಂಡು ಹಿರಿಯರು ಹಾಗೂ ಮಾರ್ಗದರ್ಶಕರಾಗಿರುವ ಪದ್ಮನಾಭ ಕುಲಾಲ್ ಎಕ್ಕಾರು ಕಾರ್ಯಕ್ರಮಕ್ಕೆ ಶುಭಹಾರೈಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮಕ್ಕಳಿಗೆ ಹಾಗೂ ದೊಡ್ಡವರಿಗಾಗಿ ವಿವಿಧ ಮೋಜಿನ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಮಧ್ಯಾಹ್ನ ಪ್ರೀತಿ ಭೋಜನ ಏರ್ಪಡಿಸಲಾಯಿತು. ಕೊನೆಯಲ್ಲಿ ಗೆದ್ದವರಿಗೆ ಬಹುಮಾನವನ್ನು ನೀಡಲಾಯಿತು. ಸೇರಿದವರು ತುಂಬಾ ಉತ್ಸಾಹದಿಂದ ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು. ಅಕ್ಷಯ ಕುಲಾಲ್, ಮುಖೇಶ್ ಕುಲಾಲ್, ಆನಂದ ಸಾಲ್ಯಾನ್, ಪ್ರವೀಣ್ ಕುಲಾಲ್, ನವನೀತ್ ಕುಲಾಲ್ ಹಾಗೂ ದಾಕ್ಷಾಯಿಣಿ ಕುಲಾಲ್ ಕಾರ್ಯಕ್ರಮದ ನೇತೃತ್ವವಹಿಸಿದ್ದರು.

0 Comments