Ticker

6/recent/ticker-posts

Ad Code

ಚುನಾಯಿತ ಪಂಚಾಯತ್ ಪ್ರತಿನಿಧಿಗಳಿಗೆ ಅಭಿನಂದನೆ

 

ನೀರ್ಚಾಲು: ತ್ರಿಸ್ತರ  ಪಂಚಾಯತ್ ಚುನಾವಣೆಯಲ್ಲಿ ನಿಯುಕ್ತ  ಪ್ರತಿನಿಧಿಗಳನ್ನು  ದೇವರಮೆಟ್ಟು ಎಲ್ ಡಿಎಫ್ ವಾರ್ಡ್ ಸಮಿತಿ ನೇತೃತ್ವದಲ್ಲಿ ಅಭಿನಂದಿಸಲಾಯಿತು. ದೇವರಮೆಟ್ಟು 4ನೇ ವಾರ್ಡ್‌ನಿಂದ ಆಯ್ಕೆಯಾದ ಅನ್ನತ್ ಬೀವಿ.ಎಂ, ಪುತ್ತಿಗೆ ಪಂಚಾಯತಿನ  ಉರುಮಿ ವಾರ್ಡ್‌ನಿಂದ ಗೆದ್ದ ಅಬ್ದುಲ್ ಮಜೀದ್ ಎಂ.ಎಚ್.  ಅವರನ್ನು ಅಭಿನಂದಿಸಲಾಯಿತು. 

ಚೆನ್ನಗುಳಿ ಉನ್ನತ್ ನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಾರ್ಡ್ ಕಾರ್ಯದರ್ಶಿ ಸುಬ್ಬಣ್ಣರೈ ವಹಿಸಿದ್ದರು. ಸೀಸನ್ ಅಬ್ದುಲ್ಲ ಕುಂಜು, ಪ್ರಕಾಶ್ ಅಮ್ಮಣ್ಣಾಯ, ಸಂತೋಷ್ ಪಳ್ಳಂ, ಜಗನ್ನಾಥ ಶೆಟ್ಟಿ,  ಉದಯಕುಮಾರ್ ಟಿ.ತಲ್ಪನಾಜೆ ಮೊದಲಾದವರು ಮಾತನಾಡಿದರು. ಸುಬೈರ್ ಬಾಪಲಿಪೋನ ಸ್ವಾಗತಿಸಿ, ಬೂತ್ ಕಾರ್ಯದರ್ಶಿ ಇಶಾಕ್ ಬಿ. ವಂದಿಸಿದರು.

Post a Comment

0 Comments