ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಕ್ಷೇತ್ರದ ಪವಿತ್ರತೆ ಹಾಗೂ ಸಮಸ್ತ ಭಕ್ತರ ಶ್ರೇಯಸ್ಸು ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ಶ್ರೀ ಕೃಷ್ಣಾನುಗ್ರಹ ಪ್ರಸಸ್ತಿ ಪುರಸ್ಕೃತರಾದ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಉದಯಾಸ್ತಮಾನ ಭಜನಾ ಸಂಕೀರ್ತನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥನ ನಡೆಯಲ್ಲಿ ಶ್ರೀ ತೇಜಸ್ವಿ ಮನೋಹರ್ ಶ್ರೀಕ್ಷೇತ್ರ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಹಿಮ್ಮೇಳ ಹಾರ್ಮೋನಿಯಂನಲ್ಲಿ ಮೋಹನ ಆಚಾರ್ಯ ಪುಲ್ಕೂರ್, ತಬಲದಲ್ಲಿ ಅಚ್ಚುತಾನಂದ ಆಚಾರ್ಯ ಕೂಡ್ಲು ಸಹಕರಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷರು ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ವಿಶ್ವ ಹಿಂದು ಪರಿಷತ್ ಕಾಸರಗೋಡು ಪ್ರಖಂಡ ಅಧ್ಯಕ್ಷರಾದ ಕೆ. ಗುರುಪ್ರಸಾದ್ ಕೋಟೆಕಣಿ, ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ ಕಾಸರಗೋಡು ಇದರ ಅಧ್ಯಕ್ಷರಾದ ಶ್ರೀ ಶಿವರಾಮ ಕಾಸರಗೋಡು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

0 Comments