ಕಾಸರಗೋಡು : ಉದುಮ ಸಮೀಪದ ಕಿಯಿಚ್ಚಿಲ್ ಎಂಬಲ್ಲಿ ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ಮಧ್ಯವಯಸ್ಕನನ್ನು ಹೊಸದುರ್ಗ ಅಬಕಾರಿ ಇಲಾಖೆಯ ಅಧಿಕಾರಿ ವಿ.ವಿ.ಪ್ರಸನ್ನ ಕುಮಾರ್ ನೇತೃತ್ವದ ತಂಡವು ಬಂಧಿಸಿದೆ. ಕೂಡ್ಲು ಗ್ರಾಮದ ಚೌಕಿ ಆಜಾದ್ ನಗರದ ದಿ.ಮುಹಮ್ಮದ್ ಎಂಬವರ ಪುತ್ರ ಅಹ್ಮದ್ ಎಂ ಆರೋಪಿಯಾಗಿದ್ದಾನೆ. ಆರೋಪಿಯು ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 1,100ಕಿಲೋ ಗಾಂಜಾವನ್ನು ವಶಪಡಿಸಿ ಪ್ರಕರಣ ದಾಖಲಿಸಲಾಗಿದೆ. ತಂಡದಲ್ಲಿ ಅಬಕಾರಿ ನಿರೀಕ್ಷಕ ಜೋಸೆಫ್ ಜೆ, ಪ್ರಿವೆಂಟಿವ್ ಆಫೀಸರ್ ನಿದೀಶ್ ವೈಕತ್, ಪ್ರಿವೆಂಟಿವ್ ಆಫೀಸರ್ ಗ್ರೇಡ್ ನಿಶಾದ್ ಪಿ, ಮತ್ತು ನಾಗರಿಕ ಅಬಕಾರಿ ಅಧಿಕಾರಿಗಳಾದ ಸಿಜು ಕೆ ಮತ್ತು ಅರುಣ್ ಆರ್ ಕೆ ನೇತೃತ್ವವಹಿಸಿದ್ದರು.

0 Comments