ಕಾಸರಗೋಡು : ಗಡಿನಾಡ ಗಾನಕೋಗಿಲೆ ಕಲಾವಿದರ ವೇದಿಕೆ ಬದಿಯಡ್ಕ ಇದರ ವತಿಯಿಂದ ನೀಡುತ್ತಿರುವ ಕಲಾ ವಿಭೂಷಣ ಪ್ರಶಸ್ತಿಗೆ ಕಾಸರಗೋಡಿನ ಹೆಸರಾಂತ ನಟ. ನಿರ್ದೇಶಕ, ನಾಟಕ ರಚನೆಗಾರರು ಶ್ರೀ ಮಧುಸೂದನ ಬಲ್ಲಾಳ್ ಅಡ್ವಾಳ ಅವರು ಆಯ್ಕೆಯಾಗಿದ್ದಾರೆ. ಜನವರಿ 25 ರಂದು ಬಾರಡ್ಕದಲ್ಲಿ ನಡೆಯುವ ಜಾನಪದ ನೃತ್ಯ 2026 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ತುಳು,ಕನ್ನಡ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಬಲ್ಲಾಳರು ಸಿನಿಮಾ, ಕಿರುಚಿತ್ರಗಳಲ್ಲಿ ಪಾತ್ರ ಗಿಟ್ಟಿಸಿಕೊಂಡಿದ್ದರು. ಕೊಡುಗೈ ದಾನಿಗಳಾಗಿ,ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಮಧುಸೂದನ ಬಲ್ಲಾಳ್ ಉದ್ಯಮಿಯಾಗಿಯೂ ಪ್ರಸಿದ್ಧಿ ಪಡೆದವರಾಗಿದ್ದಾರೆ.

0 Comments