Ticker

6/recent/ticker-posts

Ad Code

ಮಂಜೇಶ್ವರ ಗಿಳಿವಿಂಡುವಿನಲ್ಲಿ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಪಾದಿತ ಕಥಾ ಸಂಕಲನ "ಕಥಾ ದೀಪ್ತಿ" ಲೋಕಾರ್ಪಣೆ

 

 ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನಿವಾಸ ಗಿಳಿವಿಂಡುವಿನಲ್ಲಿ ಕಥಾ ದೀಪ್ತಿಯ ಬೆಳಕು ಕಣ್ಮನ ಸೆಳೆಯಿತು. ಸವಿ ಹೃದಯದ ಕವಿ ಮಿತ್ರರು ವೇದಿಕೆಯ ವತಿಯಿಂದ ಸಂಪಾದಿತ 25 ಕಥೆಗಳ ಸಂಕಲನ 'ಕಥಾ ದೀಪ್ತಿ'ಯನ್ನು ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಿಕೆ ಡಾ. ಪ್ರಮೀಳಾ ಮಾಧವ ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆಕೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಸಾಹಿತಿ ಸಂಘಟಕ ಮಧುರ ಕಾನನ ಗಣಪತಿ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕವಿ ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಕಥಾ ದೀಪ್ತಿಯನ್ನು ಪರಿಚಯಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ. ಆರ್ ಸುಬ್ಬಯ್ಯ ಕಟ್ಟೆ ನಿವೃತ್ತ ಪ್ರಾಂಶುಪಾಲರು ಪಿ ಏನ್ ಮೂಡಿತ್ತಾಯ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕಾಂತಾವರ ಕನ್ನಡ ಸಂಘದ ಕಾಂತಾವರ ಸಾಹಿತ್ಯ ಪುರಸ್ಕಾರ ಪಡೆದ ರಾಧಾಕೃಷ್ಣ ಕೆ ಉಳಿಯತ್ತಡ್ಕರನ್ನು ಅಭಿನಂದಿಸಲಾಯಿತು. ವೆಂಕಟ ಬಟ್ ಎಡನೀರು ಇವರು ಸ್ವಾಗತಿಸಿ, ಹರ್ಷಿತ ಪೆರ್ಲ ಪ್ರಾರ್ಥನೆ ಹಾಡಿದರು. ಕಥಾ ದೀಪ್ತಿಯ ಸಂಪಾದಕ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ  ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೇಮ ಉದಯ್ ವಂದಿಸಿದರು. ದಿವ್ಯ ಗಟ್ಟಿ ಪರಕ್ಕಿಲ್ಲ ಮತ್ತು ಪವಿತ್ರಾ ದಿನೇಶ್ ಕೊಕ್ಕಡ ನಿ ರೂಪಿಸಿದರು.

Post a Comment

0 Comments