Ticker

6/recent/ticker-posts

Ad Code

ರಾಜಸ್ಥಾನದಿಂದ ಮೇಕೆಗಳನ್ನು ತಲುಪಿಸುವುದಾಗಿ ಭರವಸೆ ನೀಡಿ 8.5 ಲಕ್ಷ ರೂ. ಪಂಗನಾಮ : ಮಂಜೇಶ್ವರ ನಿವಾಸಿಯಿಂದ ದೂರು

ಮಂಜೇಶ್ವರ: ರಾಜಸ್ಥಾನದಿಂದ ಮೇಕೆಗಳನ್ನು ತಲುಪಿಸುವುದಾಗಿ ಭರವಸೆ ನೀಡಿ ಮಂಜೇಶ್ವರ ಮೂಲದ ವ್ಯಕ್ತಿಯೊಬ್ಬರಿಂದ 8.5 ಲಕ್ಷ ರೂ.ಪಡೆದು  ವಂಚಿಸಲಾಗಿದೆ ಎಂದು ದೂರು ದಾಖಲಾಗಿದೆ. ಘಟನೆಯ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಉದ್ಯಾವರದ ಬಂಗಾರಕುನ್ನುವಿನ ಕೆಜೆಎಂ ಕ್ರಾಸ್ ರಸ್ತೆಯ ಸೈಯದ್ ಥಾಹಾ  ನೀಡಿದ ದೂರಿನಂತೆ  ರಾಜಸ್ಥಾನದ ಅಜ್ಮೀರ್ ಪುಷ್ಕರ್‌ನ ಹನ್ಸ್ ಮೇಕೆ ಫಾರ್ಮ್‌ನ ಭಗವಾನ್ ಚೌಲಹಂಸ್ ರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನವೆಂಬರ್ 30, 2022, ಜನವರಿ 10, 2023 ಮತ್ತು ಜನವರಿ 20, 2023 ರಂದು ಹೀಗೆ ಮೂರು ಸಲ ಲಾರಿಗಳಲ್ಲಿ ಮೇಕೆಗಳನ್ನು ತಲುಪಿಸುವುದಾಗಿ ಭರವಸೆ ನೀಡಿ ಒಟ್ಟು 8,50,000 ರೂ.ಗಳನ್ನು ಪಡೆದಿದ್ದಾಗಿ ಸೈಯದ್ ಥಾಹಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಒಪ್ಪಂದದ ಪ್ರಕಾರ ಮೇಕೆಗಳನ್ನು ತಲುಪಿಸಲಾಗಿಲ್ಲ ಅಥವಾ ಹಣವನ್ನು ಹಿಂತಿರುಗಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮಂಜೇಶ್ವರ ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ.

Post a Comment

0 Comments