ಬದಿಯಡ್ಕ: ಗ್ರಾಮ ಪಂಚಾಯತಿನಿಂದ ಮಂಜೂರುಗೊಂಡ ಮನೆ ನಿರ್ಮಿಸುವವರನ್ನು ಪೊಲೀಸರು ಮತ್ತು ಕಂದಾಯ ಇಲಾಖೆ ಹಿಂಸಿಸುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು ಎಂದು ನೀರ್ಚಾಲು ಸಿಂಧೂರ ಯುವಕ ವೃಂದ ಒತ್ತಾಯಿಸಿದೆ. 'ಸಿಂಧೂರ ಯುವಕ ವೃಂದ'ದ ಪದಾಧಿಕಾರಿಗಳು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ ಡಿ. ಶಂಕರ ಅವರಿಗೆ ನೀಡಿದ ಮನವಿಯಲ್ಲಿ ಈ ಬಗ್ಗೆ ಒತ್ತಾಯಿಸಲಾಯಿತು. ಬಡ ಜನರು ಪಂಚಾಯತಿನಿಂದ ಮಂಜೂರಾದ ಮನೆ ನಿರ್ಮಿಸುವ ವೇಳೆ ಮಣ್ಣು ತುಂಬಿಸುವಾಗ ಅಧಿಕಾರಿಗಳು ಉಪದ್ರ ಆರಂಭಿಸುತ್ತಾರೆ. ಮನೆಯ ಪಂಚಾಂಗದಲ್ಲಿ ಮಣ್ಣು ತುಂಬಿಸುವ ವೇಳೆ ಪೊಲೀಸರು ಹಾಗೂ ಕಂದಾಯ ಇಲಾಖೆ ದಾಳಿ ನಡೆಸಿ ಸಾವಿರಾರು ರೂ ದಂಡ ವಿಧಿಸಲಾಗುತ್ತದೆ. ಇದು ಬಡವರ ಪಾಲಿಗೆ ದೊಡ್ಡ ಹೊರೆಯಾಗಿದೆ. ಈ ದಂಡವನ್ನು ಪಾವತಿಸಲು ಬಡಜನರು ಪರದಾಡುವ ಸ್ಥಿತಿ ಉಂಟಾಗಿದೆ. ಆದುದರಿಂದ ಗ್ರಾಮ ಪಂಚಾಯತು ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕೆಂದು ಸಿಂಧೂರ ಯುವಕ ವೃಂದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಸಿಂಧೂರ ಯುವಕ ವೃಂದ ಅಧ್ಯಕ್ಷ ರವೀಂದ್ರ ವಿಷ್ಣುಮೂರ್ತಿ ನಗರ, ಕಾರ್ಯದರ್ಶಿ ಲೋಹಿತ್ ಕುಮಾರ್, ಸತೀಶ್ ಆಚಾರ್ಯ, ಪ್ರಶಾಂತ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

0 Comments