Ticker

6/recent/ticker-posts

Ad Code

ಪ್ರತಿಭಟನೆಯ ನಡುವೆ ಜಾಗೃತಗೊಂಡ ಕಳ್ಳಬುದ್ದಿ : ಎಎಸ್‌ಐಯ ಮಾಂಗಲ್ಯ ಸರವನ್ನೇ ಎಗರಿಸಿದ ಭೂಪರು

 

ಪಕ್ಷವೊಂದರ ಪ್ರತಿಭಟನೆಯ ತಳ್ಳಾಟ-ನೂಕಾಟದ ನಡುವೆ ಎಎಸ್ ಐಯ ಕುತ್ತಿಗೆಯಲ್ಲಿದ್ದ ಚಿನ್ನದ ಸರದ ಮೇಲೆ ಕಣ್ಣಿಟ್ಟಿದ್ದ ಕಳ್ಳಬುದ್ದಿಗಳು  ಸರವನ್ನೇ  ಎಗರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಇಲ್ಲಿ  ಕಾಂಗ್ರೆಸ್ ಪಕ್ಷವು  ಬಿಜೆಪಿ ಪಕ್ಷದ ಕಚೇರಿಗೆ ಮುತ್ತಿಗೆಯ ಪ್ರತಿಭಟನೆ ನಡೆಸಿತ್ತು. ಈ ವೇಳೆ ಕರ್ತವ್ಯ ನಿರತರಾಗಿದ್ದ ಅಮೃತಾಬಾಯಿ ಎಂಬ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸರು ನಿರತರಾಗಿದ್ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ. ಎಎಸ್ಐ ಅಮೃತಾಬಾಯಿ ಅವರು ಇತ್ತೀಚೆಗಷ್ಟೇ ಹೊಸ ಮಾಂಗಲ್ಯ ಸರವನ್ನು ಮಾಡಿಸಿದ್ದರು ಎನ್ನಲಾಗಿದೆ.  ಮಾಂಗಲ್ಯ ಸರವನ್ನು ಕಳೆದುಕೊಂಡ ಎಎಸ್ಐ ಅಮೃತಾಬಾಯಿ ಕಣ್ಣೀರಿಟ್ಟಿದ್ದಾರೆ.

Post a Comment

0 Comments