ಕುಂಬಳೆ: ಕೇಂದ್ರ ಸರಕಾರದ ಘೋಷಿತ ನೀತಿಯನ್ನುಂಲ್ಲಘಿಸಿ ಕುಂಬಳೆಯಲ್ಲಿ ಪ್ರಾರಂಭಿಸಿದ ಟೋಲ್ ಗೇಟಿನ ವಿರುದ್ಧ ಮಂಜೇಶ್ವರದ ಶಾಸಕ ಎಕೆಎಂ ಆಶ್ರಫ್ ನೇತೃತ್ವದ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಯುತ್ತಿದ್ದಂತೆ ವ್ಯಾಪಕನಾಗರಿಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇದರ ಒಂದು ಭಾಗ ಎಂಬಂತೆ ಬುಧವಾರ ರಾತ್ರಿ ಸಿಪಿಐಎಂ ಹಮ್ಮಿಕೊಂಡ ಪಂಜಿನ ಮೆರವಣಿಗೆಯಲ್ಲಿ ಜನ ಸಾಗಾರೋಪಾದಿಯಾಗಿ ಆಗಮಿಸಿ ಟೋಲ್ ಸಂಗ್ರಹ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ ಟೋಲ್ ಬೂತಿನ ಕ್ಯಾಮರ ,ಕಂಪ್ಯೂಟರ್ ಸಹಿತ ಬೂತ್ ಗಾಜಿಗೆ ಹಾನಿ ಎಸಗಿ ನಾಶ ಮಾಡಲಾಗಿದ್ದು ಈ ವೇಳೆ ಟೋಲ್ ಉದ್ಯೋಗಿಗಳು ಸ್ಥಳದಿಂದ ತಲೆ ಮರೆಸಿಕೊಂಡಿದ್ದರು.ಈ ಬಗ್ಗೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ಸಂಘರ್ಷಾವಸ್ಥೆ ಸೃಷ್ಟಿಗೆ ಕಾರಣ ಡಿವೈಎಫ್ಐ, ಎಸ್ಎಫ್ಐ ಹಾಗೂ ಯೂತ್ ಲೀಗ್ ಕಾರ್ಯಕರ್ತರ ಆಕ್ರೋಶ ಎನ್ನಲಾಗುತ್ತಿದೆ. ನೇರಾ ನೇರಾ ಟೋಲ್ ಬೂತ್ ಆಕ್ರಮಿಸಿ ಪರಿಣಾನ ಟೋಲ್ ಗೇಟಿನ ಕ್ಯಾಮರಾ ಸಹಿತ ಎಲ್ಲವನ್ನೂ ಪ್ರತಿಭಟನಾ ಕಾರರು ಆಕ್ರಮಿಸಿ ಧ್ವಂಸಗೊಳಿಸಿದ್ದಾರೆ. ಟೋಲ್ ಪ್ಲಾಝಾದಲ್ಲಿ ರಾತ್ರಿ ನಡೆದ ಈ ಸಂಘರ್ಷ ಭರಿತ ವಾತಾವರಣವನ್ನು ನಿಯಂತ್ರಿಸಲಾಗದೇ ಪೋಲೀಸರು ಪೇಚಿಗೆ ಸಿಲುಕಿದರು.ವಾಹನಗಳು ಟೋಲ್ ಪಾವತಿಸದೆ ಸಂಚರಿಸುತ್ತಿದೆ.
ಬುಧವಾರ ಜಿಲ್ಲಾಧಿಕಾರಿ ಸಮಕ್ಷಮ ಜಿಲ್ಲೆಯ ಎಲ್ಲಾ ಶಾಸಕರನ್ನು ಆಹ್ವಾನಿಸಿ ರಾ. ಹೆದ್ದಾರಿ ಪ್ರಾಧಿಕಾರದ ಪ್ರತಿನಿಧಿಗಳ ಸಮಕ್ಷಮ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳವರು ಮಾತುಕತೆ ನಡೆಸಿದ್ದರು.ಆದರೆ ಅಧಿಕೃತ ಸಭೆ ವಿಫಲವಾಗಿತ್ತು.ಇದರ ಬೆನ್ನಲ್ಲೆ ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಸಿ.ಎ.ಸುಬೈರ್ ಕರೆ ನೀಡಿದ ಪ್ರತಿಭಟನಾ ಮೆರವಣಿಗೆಗೆ ಜನ ಸಾಗಾರೋಪಾದಿಯಾಗಿ ಆಗಮಿಸಿದ್ದರು. ರಾತ್ರಿ 7.45 ರ ಸುಮಾರಿಗೆ ಕುಂಬಳೆ ಪೇಟೆಯಿಂದ ಎಡರಂಗದ ಪ್ರತಿಭಟನೆ ಹೊರಟಿತ್ತು. ಹೆದ್ದಾರಿಯಲ್ಲಿ ದೊಂದಿ ಹಿಡಿದು ಸಾಗಿದ ಪ್ರತಿಭಟನಾ ನಿರತರು ಟೋಲ್ ಪ್ಲಾಝ ತಲುಪಿದ ಬಳಿಕ ಯೂತ್ ಲೀಗ್ ಮೆರವಣಿಗೆಯೂ ತಲುಪಿತ್ತು. ಈ ಮೊದಲೇ ನಾನಾ ಕಡೆಯಿಂದ ಬಂದ ನಾಗರಿಕ ಬೆಂಬಲದಿಂದ ಟೋಲೊ ಪ್ಲಾಝಾ ಪರಿಸರ ಜನ ಜಂಗುಳಿಯಾಗಿತ್ತು.ಪ್ರತಿಭಟನಾ ಸಂದರ್ಭ ಸಾಕಷ್ಟು ಪೋಲಿಸ್ ಸ್ಥಳದಲ್ಲಿ ಇರದ ಕಾರಣ ನಿಯಂತ್ರಣ ಕಷ್ಟ ಸಾಧ್ಯವಾಗಿತ್ತು. ಟೋಲ್ ವಿರುದ್ಧ ನಡೆದ ಹೋರಾಟಕ್ಕೆ ಎಲ್ಲೆಡೆಯಿಂದಲೂ ಬೆಂಬಲ ವ್ಯಕ್ತವಾಗಿದೆ.
ಟೋಲ್ ಬೂತ್ ವಿರುದ್ಧ ಅಕ್ರಮಣ ನಡೆಯುತ್ತಿದ್ದಂತೆ ಈ ನಡುವೆ ಶಾಸಕ ಎಕೆಎಂ ಆಶ್ರಫ್ ಪ್ರತಿಭಟನಾ ಸ್ಥಳದಿಂದ ನಾಪತ್ತೆಯಾಗಿದ್ದರು. ಅವರ ಬೆಂಬಲಿಗರು ಮಾತ್ರ ಸ್ಥಳದಲ್ಲಿದ್ದರು. ರಾಷ್ಟ್ರೀಯ ಹೆದ್ದಾರಿಯ ಟೋಲ್ ಬೂತ್ ಅಧಿಕೃತರ ದೂರಿನ ಮೇರೆಗೆ ಇಂದು ನಾಶ ನಷ್ಟ ಅಂದಾಜಿಸಲಾಗುವುದು ಮತ್ತು ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದೆಂದು ಪೋಲಿಸರು ತಿಳಿಸಿದ್ದಾರೆ.


0 Comments