Ticker

6/recent/ticker-posts

Ad Code

ಭಕ್ತ ಜನ ಸಾಗರದ ಸಾಂದ್ರತೆಯಲ್ಲಿ ಮಕರ ಜ್ಯೋತಿ ದರ್ಶನ

 


ಮಕರ ಸಂಕ್ರಮಣದ ಮುಸ್ಸಂಜೆಯಲ್ಲಿ ಸಾವಿರಾರು ಭಕ್ತರಿಗೆ ಮಕರವಿಳಕ ದರ್ಶನ ನೀಡಿತು. ಕೈಮುಗಿದು ನಿಂತು ಶರಣು ಮೊರೆಯಿಡುತ್ತಿದ್ದ ಭಕ್ತರ ಮುಂದೆ ಸಂಜೆ 6.41ಕ್ಕೆ ಮಕರಜ್ಯೋತಿ ಪ್ರತ್ಯಕ್ಷವಾಯಿತು.ಅಯ್ಯಪ್ಪ ಮೂರ್ತಿಗೆ ತಿರುವಾಭರಮಣ ತೊಡಿಸಿ ದೀಪಾರಾಧನೆ ನೆರವೇರಿಸಿದ ಸಂದರ್ಭದಲ್ಲೇ ದರ್ಶನವಾಯಿತು. ಜ್ಯೋತಿ  ಬೆಳಗಿತು. ಪಂದಳಂನ ಕೊಯಿಕಲ್ ಅರಮನೆಯಿಂದ ಆರಂಭವಾದ ತಿರುವಾಭರಣ ಮೆರವಣಿಗೆಯನ್ನು ದೇವಸ್ವಂ ಮಂಡಳಿ ಅಧಿಕಾರಿಗಳ ನೇತೃತ್ವದಲ್ಲಿ ಸಂಜೆ 5.50ಕ್ಕೆ ಸಾರಂಕುತಿಯಲ್ಲಿ ಬರಮಾಡಿಕೊಳ್ಳಲಾಯಿತು.

 


ಮೆರವಣಿಗೆಯು 18ನೇ ಮೆಟ್ಟಿಲು ಮೂಲಕ ಸನ್ನಿಧಾನಂ ತಲುಪಿದಾಗ ಸಹಕಾರಿ ದೇವಸ್ವಂ ಇಲಾಖೆ ಸಚಿವ ವಿ.ಎನ್. ವಾಸವನ್, ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಜಯಕುಮಾರ್, ಶಾಸಕರಾದ ಕೆ.ಯು. ಜನೀಶ್ ಕುಮಾರ್, ಪ್ರಮೋದ್ ನಾರಾಯಣ್, ಜಿಲ್ಲಾಧಿಕಾರಿ ಎಸ್.ಪ್ರೇಮ್ ಕೃಷ್ಣನ್, ದೇವಸ್ವಂ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಬರಮಾಡಿಕೊಂಡರು.ಪೊನ್ನಂಬಲಮೆಡ್ ನಲ್ಲಿ ಮಕರಜ್ಯೋತಿ ಕಾಣಿಸಿಕೊಂಡ ಬಳಿಕ  ದರ್ಶನ ಪಡೆದ ಸಹಸ್ರಾರು ಭಕ್ತರು ಸುರಕ್ಷಿತವಾಗಿ ಬೆಟ್ಟ ಇಳಿದು ಬಂದರು. 

ಜನವರಿ 15 ರಿಂದ 18 ರವರೆಗೆ 50,000 ಜನರನ್ನು ವರ್ಚುವಲ್ ಕ್ಯೂ ಮೂಲಕ ಮತ್ತು 5,000 ಜನರಿಗೆ ಸ್ಪಾಟ್ ಬುಕಿಂಗ್ ಮೂಲಕ ಪ್ರವೇಶ ನೀಡಲಾಗುತ್ತದೆ.

Post a Comment

0 Comments