Ticker

6/recent/ticker-posts

Ad Code

ಬೈಕ್ ಗಳು ಪರಸ್ಪರ ಢಿಕ್ಕಿ : ಬಂಟ್ವಾಳದ ಯುವ ಛಾಯಾಗ್ರಾಹಕ ರಕ್ಷಿತ್ ಶೆಟ್ಟಿ ದುರ್ಮರಣ.

 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರತಿಭಾವಂತ ಯುವ ಛಾಯಾಗ್ರಾಹಕರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಶಂಭೂರು ನಿವಾಸಿಯಾದ ರಕ್ಷಿತ್ ಶೆಟ್ಟಿ (43) ಮೃತಪಟ್ಟ ದುರ್ದೈವಿ. ಬೈಕ್ ಗಳೆರಡು ಪರಸ್ಪರ ಢಿಕ್ಕಿಯಾಗಿ  ಗಂಭೀರವಾಗಿ ಗಾಯಗೊಂಡಿದ್ದ ರಕ್ಷಿತ್ ಶೆಟ್ಟಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು (ಮಾರ್ಚ್ 14) ಕೊನೆಯುಸಿರೆಳೆದಿದ್ದಾರೆ.

ಬಂಟ್ವಾಳ ವಲಯದ ಛಾಯಾಗ್ರಾಹಕ ಸಂಘದ ಸಕ್ರಿಯ ಸದಸ್ಯರಾಗಿದ್ದ ರಕ್ಷಿತ್ ಶೆಟ್ಟಿ ಅವರು ವೃತ್ತಿಯಲ್ಲಿ ಅತ್ಯುತ್ತಮ ವಿಡಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದರು.  ನಾಳೆ(ಮಾ.15) ರಕ್ಷಿತ್ ಅವರ ಮಗಳ 10ನೇ ವರ್ಷದ ಹುಟ್ಟುಹಬ್ಬವಿತ್ತು. ಮಗಳ ಜನ್ಮದಿನದ ಸಂಭ್ರಮಕ್ಕೆ ಮನೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದಾಗಲೇ ವಿಧಿಯಾಟ ತಂದೆಯ ಪ್ರಾಣವನ್ನು ಕಸಿದುಕೊಂಡಿದೆ. ಸಂಭ್ರಮಿಸಬೇಕಿದ್ದ ಮನೆಯಲ್ಲಿ  ಆಕ್ರಂದನ ಮುಗಿಲು ಮುಟ್ಟಿದೆ. ರಕ್ಷಿತ್ ಅವರ ಸಹೋದರ ರಂಜಿತ್ ಅವರು ಕೂಡ ಕೆಲವು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ.

Post a Comment

0 Comments