Ticker

6/recent/ticker-posts

Ad Code

ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕಿಳಿದ ಒಂಬತ್ತು ವರ್ಷದ ಬಾಲಕ ಮೃತ್ಯು

ಕಣ್ಣೂರು : ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕಿಳಿದ ಬಾಲಕನೋರ್ವ ಮುಳುಗಿ ಮೃತಪಟ್ಟ ದುರ್ಘಟನೆ  ಮಠಮಂಗಲಂ ಕುಟ್ಟೂರಿನಲ್ಲಿ ನಡೆದಿದೆ. ಮೃತನನ್ನು ಕುಟ್ಟೂರು ಜಿಯುಪಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಶಾಜಾದ್ (9) ಎಂದು ಗುರುತಿಸಲಾಗಿದೆ. ಶಾಜಾದ್ ಕುಟ್ಟೂರು ಮೂಲದ ಮತ್ತು ದುಬೈ ಕೆಎಂಸಿಸಿ ಪಯ್ಯನ್ನೂರು ಮಂಡಲ ಉಪಾಧ್ಯಕ್ಷ ಎಂ.ಕೆ .ಪಿ ಶೆಫೀಕ್ ಮತ್ತು ಎಂ.ಪಿ. ಸಜಿತಾ ಅವರ ಪುತ್ರನಾಗಿದ್ದಾನೆ. ಭಾನುವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ.  ಪರಿಯಾರಂ ಪೊಲೀಸರು ವಿಚಾರಣೆ ನಡೆಸಿ ಮೃತದೇಹವನ್ನು ಪರಿಯಾರಂನಲ್ಲಿರುವ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಮಹಜರು ನಡೆಸಲಾಯಿತು.

Post a Comment

0 Comments