ಉಡುಪಿ : ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಅಭಾವ ಉಂಟಾಗಿರುವಂತೆಯೇ ಉಡುಪಿಯ ಕಟಪಾಡಿಯಲ್ಲಿ ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ರಸ್ತೆ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಟ್ಯಾಂಕರ್‌ನಲ್ಲಿ ಸೋರಿಕೆ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು. ಮಗುಚಿ ಬಿದ್ದ ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ತಡೆಯಲು ನಿರಂತರ ನೀರು ಹಾಯಿಸಲಾಯಿತು. ಮಂಗಳೂರಿನಿಂದ ಇನ್ನೊಂದು ಟ್ಯಾಂಕರ್ ಬಂದ ಬಳಿಕ ಗ್ಯಾಸ್ ಶಿಫ್ಟ್ ಕಾರ್ಯ ಆರಂಭಿಸಲಾಗಿದೆ.

0 Comments