Ticker

6/recent/ticker-posts

Ad Code

ಉಕ್ಕಿನಡ್ಕದಿಂದ ನೆಲ್ಲಿಕುಂಜೆ ಕ್ಷೇತ್ರಕ್ಕೆ ಸಾಗುವ ರಸ್ತೆ ಶ್ರಮದಾನ ಕಾಮಗಾರಿ

 


ಉಕ್ಕಿನಡ್ಕ:  ಮಾರ್ಚ್ 29 ರಿಂದ ಎಪ್ರಿಲ್ 3 ರ ವರೆಗೆ ಬ್ರಹ್ಮ ಕಲಶೋತ್ಸವ ನಡೆಯಲಿರುವ  ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ಕ್ಷೇತ್ರಕ್ಕೆ ಸಾಗುವ ರಸ್ತೆಯನ್ನು ಊರ ಭಗವದ್ಭಕ್ತರು ಶ್ರಮದಾನ‌ ನಡೆಸಿ ಶುಚೀಕರಣಗೊಳಿಸಿದರು. ಉಕ್ಕಿನಡ್ಕದಿಂದ ನೆಲ್ಲಿಕುಂಜೆಯವರೆಗೆ ನಡೆದ ಶ್ರಮದಾನದಲ್ಲಿ ಹಲವಾರು ಭಗವದ್ಭಕ್ತರು ಭಾಗವಹಿಸಿದರು. ಗ್ರಾಮ ಪಂಚಾಯತು ಸದಸ್ಯ ಮಧುಸೂದನ ಉಕ್ಕಿನಡ್ಕ ಸಹಿತ ಹಲವರು ನೇತೃತ್ವ ವಹಿಸಿದರು.ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ ಡಿ, ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಜಿಲ್ಲಾ ಪಂಚಾಯತು ಸದಸ್ಯ ರಾಮಪ್ಪ ಮಂಜೇಶ್ವರ, ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಗ್ರಾಮ ಪಂಚಾಯತು ಸದಸ್ಯರು ಸಹಿತ ಹಲವರು  ಬೇಟಿ ನೀಡಿದರು.

Post a Comment

0 Comments