Ticker

6/recent/ticker-posts

Ad Code

ಎಕೆಪಿಎ ವೆಸ್ಟ್ ಯೂನಿಟ್ ವತಿಯಿಂದ ಗುರುತಿನ ಕಾರ್ಡ್ ವಿತರಣೆ

 

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯೂನಿಟ್ ಇದರ ವತಿಯಿಂದ ಎಕೆಪಿಎ ಭವನದಲ್ಲಿ 2026-27 ವರ್ಷದ ಗುರುತಿನ ಕಾರ್ಡ್ ವಿತರಣೆ ಕಾರ್ಯಕ್ರಮವು ಯೂನಿಟ್ ಅಧ್ಯಕ್ಷರಾದ ವಸಂತ್ ಕೆರೆಮನೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷರಾದ ವಾಮನ್ ಕುಮಾರ್ ನೂತನ ಸದಸ್ಯ ಕರಣ್.ಟಿ ಇವರಿಗೆ ಗುರುತಿನ ಕಾರ್ಡ್ ನೀಡಿ ಉದ್ಘಾಟಿಸಿ ಸಂಘಟನೆಯ ಸದಸ್ಯತನದ ಮಾಹಿತಿ ನೀಡಿದರು. ವಲಯ ಕಾರ್ಯದರ್ಶಿ ಸರಿತಾ ಮುಳ್ಳೇರಿಯ, ಕೋಶಾಧಿಕಾರಿ ಅಜಿತ್ ಸಿಗ್ನೇಚರ್ ಉಳಿದ ನೂತನ ಸದಸ್ಯರುಗಳಾದ ಮಹೇಶ್ ಪರಕ್ಕಿಲ, ಪ್ರಶಾಂತ್ ಕೆ, ಲೀಲಾಧರ ಆಚಾರ್ಯ ಕೆ ಇವರಿಗೆ ಗುರುತಿನ ಕಾರ್ಡ್ ನೀಡಿದರು.

ಈ ಸಂದರ್ಭದಲ್ಲಿ ವಲಯ ಕಾರ್ಯದರ್ಶಿ ಸರಿತಾ ಮುಳ್ಳೇರಿಯ ಸದಸ್ಯರಿಗೆ ಇರುವ ಸವಲತ್ತುಗಳಾದ ಗ್ರೂಪ್ ಇನ್ಶೂರೆನ್ಸ್, ಸರಕಾರ ಕ್ಷೇಮನಿಧಿ ಮತ್ತು ಎಕೆಪಿಎ ಇದರ ಅತ್ಯಂತ ಮಹತ್ತರವಾದ ಸಾಂತ್ವನ ಪದ್ದತಿಯ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಎಕೆಪಿಎಎ ಕಾಸರಗೋಡು ಜಿಲ್ಲಾ ಜತೆ ಕಾರ್ಯದರ್ಶಿ ಮನು ಎಲ್ಲೋರ, ಜಿಲ್ಲಾ ಸದಸ್ಯರಾದ ಮೈಂದಪ್ಪ ಕೆ.ಎಂ, ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ, ವಿದ್ಯಾನಗರ ಯೂನಿಟ್ ಅಧ್ಯಕ್ಷ ಪ್ರಶೋಭ್ ಶುಭಾಶಂಸನೆ ನೀಡಿದರು. ವಲಯ ಜತೆಕಾರ್ಯದರ್ಶಿ ಗಣೇಶ್ ರೈ, ಯೂನಿಟ್ ಉಪಾಧ್ಯಕ್ಷ ಅಭಿಷೇಕ್, ಯೂನಿಟ್ ಕೋಶಾಧಿಕಾರಿ ಅಮಿತ್, ಯೂನಿಟ್ ಜತೆ ಕಾರ್ಯದರ್ಶಿ ಪದ್ಮನಾಭ ನಾಯರ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿ ಗುರುತಿನ ಕಾರ್ಡ್ ಪಡಕೊಂಡರು. ಎಕೆಪಿಎಯ ಚಂದ್ರಶೇಖರ ಎಂ ಅವರು ಪ್ರಾರ್ಥನೆ ಹಾಡಿದರು ಯೂನಿಟ್ ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿ ಯೂನಿಟ್ ಪಿಆರ್‌ಓ ವಿನೋದ್ ಕಲ್ಲಂಗೈ ಧನ್ಯವಾದವಿತ್ತರು.


Post a Comment

0 Comments