Ticker

6/recent/ticker-posts

Ad Code

ಪಕ್ಷದ ಅಭ್ಯರ್ಥಿಗಳಿಗೆ ತಲೆನೋವಾದ ಸ್ವತಂತ್ರ ಅಭ್ಯರ್ಥಿಗಳ ಸ್ಪರ್ಧೆ : ರಾಜ್ಯದ ಗಮನ ಸೆಳೆದ ಮಂಜೇಶ್ಚರ ಕ್ಷೇತ್ರ : ಜಿದ್ಧಾಜಿದ್ದಿನ ಹೋರಾಟಕ್ಕೆ ಸಜ್ಜು

 

ಕುಂಬಳೆ : ಪಕ್ಷದ ಅಭ್ಯರ್ಥಿಗಿಂತಲೂ ಪಕ್ಷೇತರರೇ ಅಧಿಕ ಮಂದಿ ಸ್ಪರ್ಧಾ ಕಣದಲ್ಲಿರುವ ಮಂಜೇಶ್ಚರ, ರಾಜ್ಯದ ಗಮನ ಸೆಳೆದ ವಿಧಾನಸಭಾ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ನಾಮಪತ್ರ ಹಿಂತೆಗೆತಕ್ಕೆ ಕೊನೇ ದಿನವಾದ ಗುರುವಾರ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮೂವರು ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದರು. ಈ ಪೈಕಿ ಪ್ರಮುಖವಾಗಿ ಎಸ್ ಡಿಪಿಐ ಅಭ್ಯರ್ಥಿ ಕೆ. ಎಂ. ಅಶ್ರಫ್, ಪಕ್ಷೇತರ ಅಭ್ಯರ್ಥಿ ಮುಹ್ಮದ್ ರಫೀಕ್, ಎನ್. ಕೇಶವ ನಾಯಕ್ ನಾಮಪತ್ರ ಹಿಂತೆಗೆದುಕೊಂಡವರಾಗಿದ್ದಾರೆ. 

ಕೇರಳಂ ವಿಧಾನ ಸಭಾ ಕ್ಷೇತ್ರದ ಒಂದನೇ ಮಂಡಲವಾದ ಮಂಜೇಶ್ವರದಲ್ಲಿ ಒಟ್ಟು 11 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಎಕೆಎಂ ಅಶ್ರಫ್(ಐಯುಎಂಎಲ್) ಚಿಹ್ನೆ-ಏಣಿ, ಕೆ.ಆರ್.ಜಯಾನಂದ(ಸಿಪಿಐಎಂ), ಚಿಹ್ನೆ- ಕತ್ತಿ, ಸುತ್ತಿಗೆ, ನಕ್ಷತ್ರ, ಸಂಜೀವ(ಬಿ. ಎಸ್. ಪಿ) ಚಿಹ್ನೆ-ಆನೆ, ಕೆ. ಸುರೇಂದ್ರನ್(ಬಿಜೆಪಿ) ಚಿಹ್ನೆ-ತಾವರೆ, ಕಣ್ಣೂರು ಅಬ್ದುಲ್ಲ ಮಾಸ್ತರ್(ಪಕ್ಷೇತರ) ಚಿಹ್ನೆ – ಗ್ಯಾಸ್ ಸಿಲಿಂಡರ್, ಅಬ್ದುಲ್ ಲತೀಫ್ ಐ(ಪಕ್ಷೇತರ), ಚಿಹ್ನೆ-ಟೆಲಿವಿಷನ್, ಜೀನ್ ಲೆವಿನೋ ಮೋಂತೆರೋ(ಪಕ್ಷೇತರ) ಚಿಹ್ನೆ-ಬ್ಯಾಟರಿ ಟೋರ್ಚ್, ಜಾನ್ ಡಿ ಸೋಜ( ಪಕ್ಷೇತರ) ಚಿಹ್ನೆ-ಟ್ರಕ್, ಮೊಹ್ಮದ್ ಅಶ್ರಫ್ ಕೆ. ಎ(ಪಕ್ಷೇತರ) ಚಿಹ್ನೆ -ಗ್ಯಾಸ್ ಸ್ಟೌ, ಡಿ.ಸುರೇಂದ್ರನ್ ನಾಯರ್ (ಪಕ್ಷೇತರ) ಚಿಹ್ನೆ-ಡೈಮಂಡ್ ಆಗಿದೆ. 

ಪ್ರಬಲ ರಾಜಕೀಯ ಪಕ್ಷದ ಅಭ್ಯರ್ಥಿಗಳಾದ ಯುಡಿಎಫ್ ನ ಎಕೆಎಂ ಆಶ್ರಫ್, ಎನ್ ಡಿಎಯ ಕೆ.ಸುರೇಂದ್ರನ್, ಎಡರಂಗದ ಕೆ.ಆರ್. ಜಯಾನಂದ ನಡುವೆ ಪೈಪೋಟಿಯ ಹೋರಾಟಕ್ಕೆ ಅಖಾಡ ಸಿದ್ಧವಾಗಿದ್ದು ಈ‌ ನಡುವೆ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಪಕ್ಷೇತರರು ಸ್ಪರ್ಧಿಸುವ  ಮಂಜೇಶ್ವರದತ್ತ ಎಲ್ಲರ ಗಮನವೂ ಹರಿದಿದೆ.

Post a Comment

0 Comments