Ticker

6/recent/ticker-posts

Ad Code

ಅತ್ಯುತ್ತಮ ಸುರಕ್ಷಾ ಚಾಲಕ ಪ್ರಶಸ್ತಿ ಪುರಸ್ಕೃತ ಗುರುವಪ್ಪ .ಕೆ ಅವರಿಗೆ ಅಭಿನಂದನೆ

ಬದಿಯಡ್ಕ : 2026ರ ಕರ್ನಾಟಕ ಸರಕಾರದ ಬೆಳ್ಳಿ ಪದಕದೊಂದಿಗೆ  ಅತ್ಯುತ್ತಮ ಸುರಕ್ಷಾ ಚಾಲಕ ಪ್ರಶಸ್ತಿಯನ್ನು ಪಡೆದಿರುವ  ಗುರುವಪ್ಪ .ಕೆ ಅವರನ್ನು ಅಂಬೇಡ್ಕರ್ ವಿಚಾರ ವೇದಿಕೆಯ ವತಿಯಿಂದ ಅಭಿನಂದಿಸಲಾಯಿತು.  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರಾಗಿರುವ  ಅವರನ್ನು ಅಂಬೇಡ್ಕರ್ ಜಯಂತಿಯಂದು ಕನ್ನೆಪ್ಪಾಡಿಯಲ್ಲಿರುವ ಅವರ  ನಿವಾಸಕ್ಕೆ ತೆರಳಿ ಗೌರವಿಸಲಾಯಿತು. 

ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಗಂಗಾಧರ ಗೋಳಿಯಡ್ಕ, ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ , ಅಧ್ಯಕ್ಷ ರಾಮ ಪಟ್ಟಾಜೆ , ಕಾರ್ಯದರ್ಶಿ ಸುಂದರ ಬಾರಡ್ಕ , ಶಂಕರ ಸ್ವಾಮಿಕೃಪಾ ತಂಡದಲ್ಲಿದ್ದರು.

Post a Comment

0 Comments