Ticker

6/recent/ticker-posts

Ad Code

ಹರೀಶ್ ಸುಲಾಯ ಒಡ್ಡಂಬೆಟ್ಟು ಅವರಿಗೆ ದ್ರಾವಿಡ ಭಾಷಾ ಸಾಹಿತ್ಯ ಪುರಸ್ಕಾರ

ಚೆರುಪುಳ : ಕಕ್ಕೋಡೆ  ಇಲ್ಲಿಯ ನವಪುರಂ ಮತಾತೀತ  ದೇವಾಲಯದ ವಾರ್ಷಿಕ ಉತ್ಸವದ ಪ್ರಯುಕ್ತ ನೀಡುವ ಕನ್ನಡ ವಿಭಾಗದ ದ್ರಾವಿಡ ಭಾಷಾ ಸಾಹಿತ್ಯ ಪ್ರಶಸ್ತಿಯನ್ನು ಚುಟುಕು ಕವಿ, ಸಾಹಿತಿ, ಶಿಕ್ಷಕ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರಿಗೆ ನವಪುರಂನಲ್ಲಿ ನಡೆದ 'ನವಪುರಂ ನವರಸಂ' ಕಾರ್ಯಕ್ರಮದ ವೇದಿಕೆಯಲ್ಲಿ ನೀಡಲಾಯಿತು. ಅವರಿಗೆ ಈ ಪ್ರಶಸ್ತಿಯನ್ನು ಖ್ಯಾತ ಮಲಯಾಳಂ ಕವಿ ಹಾಗೂ ಸಿನಿಮಾ ಸಾಹಿತಿ  ಪಿ.ಕೆ.ಗೋಪಿ ಅವರು ಪ್ರದಾನ ಮಾಡಿದರು. 

ನವಪುರಂ ಮತಾತೀತ ದೇವಾಲಯದ ಸಂಚಾಲಕ ಪ್ರಾಪೋಯಿಲ್ ನಾರಾಯಣ ಮಾಸ್ಟರ್, ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ , ಗಡಿನಾಡ ಚೇತನ ಹಿರಿಯ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಮತ್ತಿತರು  ಉಪಸ್ಥಿತರಿದ್ದರು.

Post a Comment

0 Comments