Ticker

6/recent/ticker-posts

Ad Code

ಎನ್ ಡಿ ಎ ಅಭ್ಯರ್ಥಿ ಚುನಾವಣಾ ಪ್ರಚಾರ ಪರ್ಯಟನೆ : ವರ್ಕಾಡಿ ಪಂಚಾಯತ್‌ನಲ್ಲಿ ಭವ್ಯ ಸ್ವಾಗತ


ಮಂಜೇಶ್ವರ : ವರ್ಕಾಡಿ ಪಂಚಾಯತ್‌ನಲ್ಲಿ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಚುನಾವಣಾ ಪ್ರಚಾರ ಪರ್ಯಟನೆ ನಡೆಸಿದ್ದು ಅವರಿಗೆ ಭವ್ಯ ಸ್ವಾಗತ ಲಭಿಸಿದೆ. ನಿನ್ನೆ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಪರ್ಯಟನೆಯಲ್ಲಿ, ಸುರೇಂದ್ರನ್ ಹಲವಾರು ಮತದಾರರನ್ನು ಭೇಟಿ ಮಾಡಿ ಮತ ಯಾಚಿಸಿದರು. 


ದೈಗೋಳಿ ಶ್ರೀ ಸತ್ಯಸಾಯಿ ಸೇವಾ ಆಶ್ರಮ ಮತ್ತು ಹಲವು ಕ್ಷೇತ್ರಗಳಿಗೆ ಭೇಟಿ ನೀಡಿದರು. ಸುಂಕದಕಟ್ಟೆಯ ಅಂಗಡಿಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಅಭ್ಯರ್ಥಿಯು ತಿಮ್ಮಂಗೂರಿನಲ್ಲಿ ನಡೆದ ಕುಟುಂಬ ಸಭೆಯಲ್ಲೂ ಭಾಗವಹಿಸಿದರು. ಪಂಚಾಯತ್ ಅಧ್ಯಕ್ಷ ಭಾಸ್ಕರ ಪೊಯ್ಯೆ, ಮಂಡಲ ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ, ಮಮತಾ ಕುಲಾಲ್, ಕೃಷ್ಣಮೂರ್ತಿ ಭಟ್, ಶ್ವೇತಾ ಪಾವಳ, ಚಂದ್ರಶೇಖರ್ ಮತ್ತು ಇತರರು ಉಪಸ್ಥಿತರಿದ್ದರು.

Post a Comment

0 Comments