ಕೋಝಿಕೋಡ್ : ಪಟಾಕಿ ಸಿಡಿದು ಪ್ಲಸ್ ಒನ್ ವಿದ್ಯಾರ್ಥಿಯೊಬ್ಬರು ದುರಂತ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಝಿಕೋಡ್‌ನ ಕೊಯಿಲಾಂಡಿ ಮೂಲದ ಅದ್ವೈತ್ (16) ಮೃತಪಟ್ಟ ವಿದ್ಯಾರ್ಥಿ. ವಿಷು ಹಬ್ಬದ ಹಿನ್ನೆಲೆಯಲ್ಲಿ ಅದ್ವೈತ್ ತನ್ನ ಸ್ನೇಹಿತರೊಂದಿಗೆ ಪಟಾಕಿ ಸಿಡಿಸುತ್ತಿದ್ದಾಗ ಅವರ ಕೈಯಲ್ಲಿ ಪಟಾಕಿ ಸ್ಫೋಟಗೊಂಡಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅದ್ವೈತ್ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರ ಜೀವವನ್ನು ಉಳಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಝಿಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗುವುದು. ಘಟನೆಗೆ ಸಂಬಂಧಿಸಿದಂತೆ ಕೊಯ್ಲಾಂಡಿ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
.jpeg)
0 Comments