ವಿಟ್ಲ : ಶ್ರೀ ಮಂತ್ರವಾದಿ ಗುಳಿಗ ಮತ್ತು ಶ್ರೀ ಕೊರಗ ತನಿಯ ಸಾನಿಧ್ಯ ಚೆಲ್ಲಡ್ಕ ಇದರ ವತಿಯಿಂದ 2025 - 26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾದ ಪೃಥ್ವಿ ಮತ್ತು ಕಾರ್ತಿಕ್ ಇವರಿಗೆ ಅಭಿನಂದನೆ ನಡೆಸಲಾಯಿತು.
ಶ್ರೀ ಮಂತ್ರವಾದಿ ಗುಳಿಗ ಮತ್ತು ಶ್ರೀ ಕೊರಗ ತನಿಯ ಸಾನಿಧ್ಯ ಚೆಲ್ಲಡ್ಕ ಹಾಗೂ ಊರ ಹತ್ತು ಸಮಸ್ತರು ಭಾಗವಹಿಸಿದ್ದರು. ಉದಯಗಿರಿ ಕುದ್ದುಪದವು ಶಾಲೆ ಅಧ್ಯಾಪಕ ವಿಠಲ ಮಾಸ್ಟರ್ ಹಾಗೂ ಶಿವಶಕ್ತಿ ಯುವಕ ಮಂಡಾಳ ಅಧ್ಯಕ್ಷ ಸತೀಶ ಕೆ ಮುಖ್ಯ ಅತಿಥಿಗಳಾಗಿದ್ದರು. ಅಡ್ಯನಡ್ಕ ಒಕ್ಕೂಟದ ಅಧ್ಯಕ್ಷ ಪುಷ್ಪಾಕರ ರೈ ವಂದಿಸಿದರು. ಅಡ್ಯನಡ್ಕ ಸೇವಾ ಪ್ರತಿನಿಧಿ ಗಾಯತ್ರಿ ಸ್ವಾಗತಿಸಿ, ನಿರೂಪಿಸಿದರು.

0 Comments